ನ್ಯೂ ಇಯರ್ ಪಾರ್ಟಿ ಗೆ ನ್ಯೂ ರೂಲ್ಸ್: ಮಧ್ಯರಾತ್ರಿ 1 ಗಂಟೆವರೆಗಷ್ಟೇ ಅವಕಾಶ

Prasthutha|

ಬೆಂಗಳೂರು: ರಾಜ್ಯದಲ್ಲಿ ಕೊರೋನ 4ನೇ ಅಲೆ ಆತಂಕದ ಮಧ್ಯೆ ರಾಜ್ಯ ಸರ್ಕಾರ ಕೊರೊನಾ ನಿಯಂತ್ರಿಸುವ ಸಲುವಾಗಿ ಈಗಾಗಲೆ ಹಲವು ನಿಯಮಗಲನ್ನು ಜಾರಿಗೆ ತಂದ್ದಿದ್ದು, ರಾಜ್ಯಾದ್ಯಂತ ಮತ್ತೆ ಮಾಸ್ಕ್ ಕಡ್ಡಾಯ ರೂಲ್ಸ್ ಜಾರಿ ಮಾಡಲಾಗಿದೆ. ಹಾಗೆಯೇ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಮತ್ತೆ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದೆ.

- Advertisement -

ಹೊಸ ವರ್ಷದ ಆಚರಣೆಗೆ ಸರ್ಕಾರ ಮಾಸ್ಕ್ ಕಡ್ಡಾಯ ಮಾಡಿದ್ದಲ್ಲದೇ ಸಂಭ್ರಮಾಚರಣೆಗೆ ಮಧ್ಯರಾತ್ರಿ 1 ಗಂಟೆವರೆಗೆ ಡೆಡ್‍ಲೈನ್ ನೀಡಲಾಗಿದೆ. ಪಾರ್ಟಿಗಳಲ್ಲಿ ಹಿರಿಯರು, ಮಕ್ಕಳು, ಗರ್ಭಿಣಿಯರು ಭಾಗಿದಂತೆ ಪಾರ್ಟಿ ಆಯೋಜಕರು ನೋಡಿಕೊಳ್ಳಬೇಕು. ಮಧ್ಯರಾತ್ರಿ 1 ಗಂಟೆ ನಂತರ ಎಂಜಿ ರೋಡ್, ಬ್ರಿಗೇಡ್ ರೋಡ್ ಸೇರಿದಂತೆ ಇತರೆಡೆ ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇರಲ್ಲ ಮತ್ತು ಪಬ್, ಹೋಟೆಲ್, ರೆಸ್ಟೋರೆಂಟ್ ಮಧ್ಯರಾತ್ರಿ 1 ಗಂಟೆ ನಂತರ ಬಂದ್ ಮಾಡುವುದು ಕಡ್ಡಾಯವಾಗಿದೆ.

ಇನ್ನು ಬಾರ್ ಪಬ್‍ಗಳಲ್ಲಿ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದ್ದು, ಟೇಬಲ್ ಇದ್ದಷ್ಟು ಮಾತ್ರ ಪಾರ್ಟಿಗೆ ಅವಕಾಶ ಕೊಡುವಂತೆ ಸೂಚನೆ ನೀಡಲಾಗಿದೆ. ಕೋವಿಡ್ ವ್ಯಾಕ್ಸಿನ್ ಡಬಲ್ ಡೋಸ್ ಇಲ್ಲದಿದ್ದರೆ ಒಳ ಪ್ರವೇಶಕ್ಕೆ ಅನುಮತಿ ನೀಡಬಾರದೆಂದು ಸೂಚಿಸಲಾಗಿದೆ.

Join Whatsapp