ಎಚ್ ಐಎಫ್ ನಿಂದ ದುಬೈ ಬದ್ರಿಯಾ ಫ್ರೆಂಡ್ಸ್ ಸಹಯೋಗದೊಂದಿಗೆ ನೂತನ ಮಸೀದಿ ಲೋಕಾರ್ಪಣೆ

Prasthutha|

ಬೆಂಗಳೂರು: ಎಚ್ ಐಎಫ್ ವತಿಯಿಂದ ಬದ್ರಿಯಾ ಫ್ರೆಂಡ್ಸ್ ದುಬೈ ಸಹಯೋಗದೊಂದಿಗೆ ಕರ್ನಾಟಕ ಆಂಧ್ರ ಗಡಿಭಾಗದ ಅಬ್ದುಲ್ಲಾ ಸಾಬ್ ಬಸ್ತಿ ಎಂಬಲ್ಲಿ ಸುಸಜ್ಜಿತ ನೂತನ ಮಸೀದಿಯನ್ನು ನಿರ್ಮಿಸಲಾಗಿದ್ದು, ಇದನ್ನು ಮೊಹಿದ್ದೀನ್ ಉಸ್ಮಾನ್ ಕಂದಕ್ ಉದ್ಘಾಟಿಸಿದರು. ಸ್ಥಳೀಯ ಖಾಜಿ ಮೌಲಾನ ರಿಯಾಝ್ ಅಹ್ಮದ್ ದುವಾ ನೆರವೇರಿಸಿದರು.

- Advertisement -

ಎಹ್ಸಾನ್ ಮಸೀದಿಯ ಕಾರ್ಯದರ್ಶಿ ಹನೀಫ್ ಪಿ ಎಸ್, ಬಾವ ಉಳ್ಳಾಲ್, ಉದ್ಯಮಿ ತಸ್ಲಿಮ್, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಎಚ್ ಐ ಎಫ್ ಅಧ್ಯಕ್ಷ ನಾಜಿಮ್ ಎ.ಕೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಒಮ್ಮೆಲೆ ಸುಮಾರು 500ಕ್ಕೂ ಹೆಚ್ಚು ಜನ ನಮಾಝ್ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದಂತ ಜುಮಾ ಮಸೀದಿಯಾಗಿದೆ. ಬದ್ರಿಯಾ ಫ್ರೆಂಡ್ಸ್ ದುಬೈ ವತಿಯಿಂದ ಮಸೀದಿಯ ನಿರ್ಮಾಣ ವೆಚ್ಚವನ್ನು ಬರಿಸಲಾಯಿತು. ಎಚ್ ಐ ಎಫ್ ಎಂ.ಡಿ.ಪಿ ಮಸ್ಜಿದ್ ಡೆವಲಪ್ಮೆಂಟ್ ಪ್ರಾಜೆಕ್ಟ್ ವತಿಯಿಂದ ನಿರ್ಮಿತವಾದ 7 ಮಸೀದಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.



Join Whatsapp