ಕೇಂದ್ರದ ಹೊಸ ಐಟಿ ನಿಯಮಗಳು; ಖಾಸಗಿತನದ ಹಕ್ಕುಗಳನ್ನು ಅತಿಕ್ರಮಿಸುತ್ತವೆ : ಗಾಯಕ ಟಿ.ಎಂ. ಕೃಷ್ಣ ಹೈಕೋರ್ಟ್‌ ನಲ್ಲಿ ಅರ್ಜಿ

Prasthutha|

ಚೆನ್ನೈ : ಕೇಂದ್ರ ಸರಕಾರದ ಹೊಸ ಐಟಿ ನಿಯಮಗಳು ತಮ್ಮ ಖಾಸಗಿತನದ ಹಕ್ಕನ್ನು ಅತಿಕ್ರಮಿಸುತ್ತಿವೆ ಮತ್ತು ಅವುಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಖ್ಯಾತ ಗಾಯಕ ಟಿ.ಎಂ. ಕೃಷ್ಣ ಮದ್ರಾಸ್‌ ಹೈಕೋರ್ಟ್‌ ನಲ್ಲಿ ಅರ್ಜಿಯೊಂದನ್ನು ದಾಖಲಿಸಿದ್ದಾರೆ.

- Advertisement -

ಹೊಸ ಐಟಿ ನಿಯಮಗಳು ಅಸ್ಪಷ್ಟವಾಗಿವೆ ಮತ್ತು ಅಸಮಂಜಸತೆಯಿಂದ ಕೂಡಿವೆ ಎಂದು ಅವರು ತಮ್ಮ ಅರ್ಜಿಯಲ್ಲಿ ಆಪಾದಿಸಿದ್ದಾರೆ. ಇದು ವಾಕ್‌ ಸ್ವಾತಂತ್ರ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಾಲಯ, ಮೂರು ವಾರಗಳೊಳಗೆ ಉತ್ತರಿಸುವಂತೆ ಕೇಂದ್ರಕ್ಕೆ ನರ್ದೇಶನ ನೀಡಿದೆ.



Join Whatsapp