IPL: ಬೆಂಗಳೂರು ತಂಡಕ್ಕೆ ಸಂಜಯ್ ಬಂಗಾರ್ ನೂತನ ಮುಖ್ಯ ಕೋಚ್

Prasthutha|

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ –IPL 2022 ಆವೃತ್ತಿಗಾಗಿ ಬಲಿಷ್ಠ ತಂಡ ಕಟ್ಟಲು ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ತೆರೆಮರೆಯಲ್ಲಿ ತಯಾರಿ ನಡೆಸಿವೆ. ಟೀಮ್ ಇಂಡಿಯಾದ ನಿರ್ಗಮಿತ ಕೋಚ್ ರವಿಶಾಸ್ತ್ರಿ ಅವರನ್ನು ನೂತನ ಎರಡು ಫ್ರಾಂಚೈಸಿಗಳು ಸಮೀಪಿಸಿದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಖ್ಯ ಕೋಚ್ ಹುದ್ದೆಗೆ ಟೀಮ್ ಇಂಡಿಯಾದ ಮಾಜಿ  ಬ್ಯಾಟಿಂಗ್ ಕೋಚ್  ಸಂಜಯ್ ಬಂಗಾರ್ ಅವರನ್ನು ನೇಮಿಸಿದೆ.

- Advertisement -

RCBಯ ಮುಖ್ಯ ಹೆಚ್ಚುವರಿ ಕೋಚ್ ಆಗಿದ್ದ ಮೈಕ್ ಹಸ್ಸನ್ ಅವರ ಜಾಗಕ್ಕೆ ಸಂಜಯ್ ಬಂಗಾರ್ ಅವರನ್ನು ನೇಮಿಸಲಾಗಿದೆ. ಮೈಕ್ ಹಸ್ಸನ್ RCB ತಂಡದ ಕ್ರಿಕೆಟ್ ಕಾರ್ಯಾಚರಣೆಗಳ  ನಿರ್ದೇಶಕರಾಗಿ ತಂಡದ ಜೊತೆಗಿರಲಿದ್ದಾರೆ. RCB ತಂಡದ ಬ್ಯಾಟಿಂಗ್ ಸಲಹೆಗಾರನಾಗಿದ್ದ ಸಂಜಯ್ ಬಂಗಾರ್ ಮುಂದಿನ ಎರಡು ಆವೃತ್ತಿಗಳಲ್ಲಿ ಮುಖ್ಯ ಕೋಚ್ ಆಗಿ ತಂಡವನ್ನು ತರಬೇತುಗೊಳಿಸಲಿದ್ದಾರೆ.

ಮುಖ್ಯ ಕೋಚ್ ಆದ ಬಗ್ಗೆ ಪ್ರತಿಕ್ರಿಯಿಸಿರುವ ಸಂಜಯ್ ಬಂಗಾರ್, RCBಯಂಥ ಉತ್ತಮ ಫ್ರಾಂಚೈಸಿಗೆ ಮುಖ್ಯ ಕೋಚ್‌ ಆಗಿ ಸೇವೆ ಸಲ್ಲಿಸುವುದು ದೊಡ್ಡ ಅವಕಾಶ ಮತ್ತು ಅದೊಂದು ಗೌರವ. IPL ಮೆಗಾ ಹರಾಜು ಮತ್ತು ಅದರ ಬಳಿಕ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಎಲ್ಲರ ಬೆಂಬಲದೊಂದಿಗೆ ನಾವು ಉತ್ತಮವಾದದ್ದನ್ನು ಸಾಧಿಸಬಹುದು, RCB ತಂಡವನ್ನು ಚಾಂಪಿಯನ್ ಪಟ್ಟದಲ್ಲಿ ಕಾಣುವುದು ನನ್ನ ಗುರಿ  ಎಂದಿದ್ದಾರೆ.

- Advertisement -

ಮುಖ್ಯ ಕೋಚ್ ಆಗಿ ನೇಮಕ ಕುರಿತು ಪ್ರತಿಕ್ರಯಿಸಿರುವ ಆರ್‌ಸಿಬಿ ಮುಖ್ಯಸ್ಥ ಪ್ರಥಮೇಶ್ ಮಿಶ್ರಾ, ಕಠಿಣ ಮತ್ತು ದೃಢವಾದ ಆಯ್ಕೆ ವಿಧಾನವನ್ನು ಅನುಸರಿಸಿ ಸಂಜಯ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ತಂಡದ ಸಾಮರ್ಥ್ಯವನ್ನು ಹೆಚ್ಚಿಸಲು ಅವರ ಅನುಭವ ನೆರವಾಗಲಿದೆ ಎಂಬ ವಿಶ್ವಾಸವಿದೆ. ಹೊಸ ಅಧ್ಯಾಯ ಪ್ರಾರಂಭಿಸುತ್ತಿರುವ ಸಂಜಯ್‌ ಬಂಗಾರ್‌ ಅವರಿಗೆ ಶುಭ ಕೋರುತ್ತೇನೆ,‘ ಎಂದು ಹೇಳಿದ್ದಾರೆ.



Join Whatsapp