ಸಂಪುಟ ಸದಸ್ಯರಿಗೆ ಹಿಂದಿ,ಇಂಗ್ಲಿಷ್ ಗೊತ್ತಿಲ್ಲ: ಮಿಜೋರಾಂ ಮುಖ್ಯಮಂತ್ರಿ ಅಳಲು!

Prasthutha|

ಗುವಾಹಟಿ: ತಮ್ಮ ಸಂಪುಟ ಸದಸ್ಯರಿಗೆ ಹಿಂದಿ ಮತ್ತು ಇಂಗ್ಲಿಷ್ ಗೊತ್ತಿಲ್ಲದ ಕಾರಣ ಮುಖ್ಯ ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಬೇಕೆಂದು ಮಿಜೋರಾಂ ಮುಖ್ಯಮಂತ್ರಿ ಸೋರಂ ತಂಗ ಅವರು ಒತ್ತಾಯಿಸಿದ್ದಾರೆ.

- Advertisement -

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಅವರು, ತಮ್ಮ ಸಚಿವರಿಗೆ ಹಿಂದಿ ಗೊತ್ತಿಲ್ಲದ ಕಾರಣ ರಾಜ್ಯದಲ್ಲಿ ಮಿಜೋ ಭಾಷೆ ಗೊತ್ತಿಲ್ಲದ ಮುಖ್ಯ ಕಾರ್ಯದರ್ಶಿಯನ್ನು ನೇಮಿಸಬಾರದು ಎಂದು ಬೇಡಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ನೇಮಿಸಿದ ರೇಣು ಶರ್ಮಾ ಅವರ ಸ್ಥಾನಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೆ.ಸಿ.ರಾಮ್ ತಂಗ ಅವರನ್ನು ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಿಸುವಂತೆ ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ. ರಾಜ್ಯದ ಸಚಿವರಿಗೆ ಹಿಂದಿ ಮಾತ್ರವಲ್ಲ ಇಂಗ್ಲಿಷ್ ಕೂಡ ಬರುವುದಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

- Advertisement -

ಈ ಪರಿಸ್ಥಿತಿಯಲ್ಲಿ ಮಿಜೋ ಭಾಷೆ ಗೊತ್ತಿಲ್ಲದ ಮುಖ್ಯ ಕಾರ್ಯದರ್ಶಿಯೊಂದಿಗೆ ಕೆಲಸ ಮಾಡುವುದು ಎಲ್ಲರಿಗೂ ಅನಾನುಕೂಲವಾಗುತ್ತದೆ. ಯಾವುದೇ ರಾಜ್ಯದಲ್ಲೂ ಅನ್ಯಭಾಷಿಕ ಮುಖ್ಯ ಕಾರ್ಯದರ್ಶಿ ಉತ್ತಮ ಆಡಳಿತ ನಡೆಸುವುದು ಕಷ್ಟ ಎಂದು ಸೋರಾಮ್ ತಂಗ ಹೇಳಿದರು.

ಎನ್‌ಡಿಎ ಸರ್ಕಾರದ ಅತ್ಯಂತ ನಿಷ್ಠಾವಂತ ಸದಸ್ಯ ಎಂಬ ನೆಲೆಯಲ್ಲಿ ತಮ್ಮ ಮನವಿಯನ್ನು ಸ್ವಿಕರಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ಸಿಗರು ತಮ್ಮನ್ನು ಗೇಲಿ ಮಾಡಲಿದ್ದಾರೆ ಎಂದು ಪತ್ರದಲ್ಲಿ ಅವರು ಒತ್ತಾಯಿಸಿದ್ದಾರೆ.

Join Whatsapp