ಹೊಸ ಸ್ವರೂಪದ ಕೊರೊನ ವೈರಸ್ ಬಗ್ಗೆ ಜಾಗೃತಿಯಿರಲಿ, ಭಯಪಡುವ ಅಗತ್ಯವಿಲ್ಲ : WHO ಸ್ಪಷ್ಟನೆ

Prasthutha|

ಜಿನೇವಾ : ಬ್ರಿಟನ್ ನಲ್ಲಿ ಕಂಡುಬಂದಿರುವ ಹೊಸ ಸ್ವರೂಪದ ಕೊರೊನ ವೈರಸ್ ಸ್ವರೂಪದ ಬಗ್ಗೆ ಭಯಭೀತಿಗೊಳ್ಳುವ ಅಗತ್ಯವಿಲ್ಲ, ಇದು ಸಾಂಕ್ರಾಮಿಕ ರೋಗ ವಿಕಸನದ ಸಹಜ ಭಾಗವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ ಒ) ಸ್ಪಷ್ಟನೆ ನೀಡಿದೆ.

ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕೊರೊನದ ಹೊಸ ಸ್ವರುಪದ ವೈರಸ್ ಪತ್ತೆಯಾಗಿದ್ದು, ಹೀಗಾಗಿ ಜಗತ್ತಿನಾದ್ಯಂತ ಆತಂಕ ವ್ಯಕ್ತವಾಗಿದೆ. ಈಗಾಗಲೇ ಯುಕೆಗೆ ಬಹುತೇಕ ರಾಷ್ಟ್ರಗಳು ತಮ್ಮ ಪ್ರಯಾಣವನ್ನು ಬಂದ್ ಮಾಡಿವೆ. ತಮ್ಮ ರಾಷ್ಟ್ರಗಳಿಂದ ಯುಕೆಗೆ ತೆರಳುವ ವಿಮಾನಗಳನ್ನು ಹಾಗೂ ಆಗಮಿಸುವ ವಿಮಾನಗಳನ್ನು ಬಂದ್ ಮಾಡಿ ನಿರ್ಧಾರ ಕೈಗೊಂಡಿವೆ. ಭಾರತ ಕೂಡ ಡಿ.31ರ ವರೆಗೆ ಇಂಗ್ಲೆಂಡ್ ಗೆ ವಿಮಾನ ಹಾರಾಟಕ್ಕೆ ನಿಷೇಧ ಹೇರಿದೆ.

- Advertisement -

ಹೀಗಾಗಿ ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಮೈಕ್ ರಯಾನ್, ನಾವು ಸಮತೋಲನವನ್ನು ಕಾಪಾಡಬೇಕು, ಪಾರದರ್ಶಕತೆ ಬಹಳ ಮುಖ್ಯ. ಸಾರ್ವಜನಿಕರಿಗೆ ಮಾಹಿತಿ ನೀಡುವುದು ಅತ್ಯಗತ್ಯ. ಆದರೆ, ಇದು ವೈಸರ್ ವಿಕಾಸದ ಸಾಮಾನ್ಯ ಭಾಗ ಎಂಬುದನ್ನು ತಿಳಿದುಕೊಳ್ಳುವುದೂ ಅಷ್ಟೇ ಮುಖ್ಯ ಎಂದು ಹೇಳಿದ್ದಾರೆ.

ಬ್ರಿಟನ್ ನ ಅಂಕಿ ಅಂಶಗಳನ್ನು ಪರಿಶೀಲಿಸಿರುವ ವಿಶ್ವ ಸಂಸ್ಥೆಯು ಈಗಿನ ವೈರಸ್ ಗಿಂತಲೂ, ಹೊಸದಾಗಿ ಕಾಣಿಸಿಕೊಂಡಿರುವ ವೈರಸ್ ಹೆಚ್ಚು ಮಾರಕವಾಗಿದೆ ಎಂಬುದಕ್ಕೆ ಪುರಾವೆಗಳಿಲ್ಲ ಎಂದು ರಯಾನ್ ಸ್ಪಷ್ಟಪಡಿಸಿದ್ದಾರೆ.  

- Advertisement -