ಹೊಸ ‘ಬಿಂಗೊ’ ಜಾಹೀರಾತು ನಟ ಸುಶಾಂತ್ ಸಿಂಗ್ ರನ್ನು ಅಣಕಿಸಿತೇ? | ಸಾಮಾಜಿಕ ಜಾಲತಾಣದಲ್ಲಿ ಕೆಲವರ ಆಕ್ರೋಶ

Prasthutha: November 20, 2020

ಮುಂಬೈ : ‘ಬಿಂಗೊ’ ಸ್ನಾಕ್ ಜಾಹೀರಾತಿನಲ್ಲಿ ಇತ್ತೀಚೆಗೆ ಆತ್ಮಹತ್ಯೆಗೈದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಅವಮಾನಿಸಿದೆ ಎಂದು ಕೆಲವರು ಪ್ರತಿಪಾದಿಸಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟಪಡಿಸಿರುವ ಐಟಿಸಿ ಫೂಡ್ಸ್, ಜಾಹೀರಾತಿನಲ್ಲಿ ಯಾವುದೇ ಬಾಲಿವುಡ್ ಸೆಲೆಬ್ರಿಟಿಯನ್ನು ಅಣಕಿಸುವ ಉದ್ದೇಶವಿರಲಿಲ್ಲ ಎಂದು ಹೇಳಿದೆ.

ಜಾಹೀರಾತಿನಲ್ಲಿ ನಟ ರಣವೀರ್ ಸಿಂಗ್ ಬಿಂಗೊ ತಿನ್ನುವ ವ್ಯಕ್ತಿಯೊಬ್ಬನ ಪಾತ್ರ ನಿಭಾಯಿಸುತ್ತಾರೆ. ಅದರಲ್ಲಿ, ಅವರೊಂದಿಗೆ ನಿಮ್ಮ ಮುಂದಿನ ಯೋಜನೆ ಏನು ಎಂದು ಹಲವು ಮಂದಿ ಕೇಳುತ್ತಿರುತ್ತಾರೆ. ಆಗ ರಣವೀರ್ ಸಿಂಗ್ ಆಲ್ಗೊರಿದಮ್ಸ್, ಪ್ಯಾರಾಡೊಕ್ಸಿಕಲ್, ಫೋಟೊನ್ಸ್ ಆಂಡ್ ಏಲಿಯನ್ಸ್ ಬಗ್ಗೆ ಮಾತನಾಡುತ್ತಾರೆ. ಎಲ್ಲಿಯೂ ಸುಶಾಂತ್ ಸಿಂಗ್ ಹೆಸರು ಪ್ರಸ್ತಾಪವಾಗುವುದಿಲ್ಲ.

ಆದರೆ, ಸುಶಾಂತ್ ಸಿಂಗ್ ಅಭಿಮಾನಿಗಳು ಎಂದು ಹೇಳಿಕೊಂಡಿರುವ ಕೆಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ, ಜಾಹೀರಾತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೃತ ನಟನ ವಿಜ್ಞಾನದ ಕುರಿತ ಆಸಕ್ತಿ, ಮುಖ್ಯವಾಗಿ ಬಾಹ್ಯಾಕಾಶ ಕುರಿತ ಅವರ ಆಸಕ್ತಿಯೊಂದಿಗೆ ಇದು ಹೊಂದಿಕೆಯಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಜಾಹೀರಾತು ಕಳೆದ ವರ್ಷ ಚಿತ್ರೀಕರಿಸಲಾಗಿತ್ತು, ಉತ್ಪನ್ನ ಲೋಕಾರ್ಪಣೆ ತಡವಾಗಿದ್ದುದರಿಂದ, ಈಗ ಬಿಡುಗಡೆಗೊಳಿಸಲಾಗಿದೆ. ಆರೋಪಗಳು ಸಂಪೂರ್ಣ ಸುಳ್ಳು, ತಪ್ಪಾದುದು ಮತ್ತು ಚೇಷ್ಟೆಯಿಂದ ಕೂಡಿದುದು ಎಂದು ಐಟಿಸಿ ಫೂಡ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಜಾಹೀರಾತನ್ನು ಅದು ಡಿಲಿಟ್ ಮಾಡಿಲ್ಲ.    

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!