ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್ ನಲ್ಲಿ ಕೊರೊನ ತಡೆಗೆ ವಿಫಲ | ಅಹಮದಾಬಾದ್ ನಗರದಲ್ಲಿ ಮತ್ತೆ ಕರ್ಫ್ಯೂ

Prasthutha|

ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್ ನಲ್ಲಿ ಕೊರೊನ ತಡೆಗೆ ವಿಫಲ | ಅಹಮದಾಬಾದ್ ನಗರದಲ್ಲಿ ಮತ್ತೆ ಕೋವಿಡ್-19 ಕರ್ಫ್ಯೂ  

ಅಹಮದಾಬಾದ್ : ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ನ ಅಹಮದಾಬಾದ್ ನಲ್ಲಿ ದೀಪಾವಳಿ ನಂತರ ಕೊರೊನದ ಹೊಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದೆ.

- Advertisement -

ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆ ವರೆಗೆ 57 ಗಂಟೆಗಳ ಕರ್ಫ್ಯೂ ವಿಧಿಸಲು ನಿರ್ಧರಿಸಲಾಗಿದೆ.

ಈ ವೇಳೆ ಅಹಮದಾಬಾದ್ ನಗರದಲ್ಲಿ ಸಂಪೂರ್ಣ ನಿರ್ಬಂಧ ವಿಧಿಸಲಾಗಿದ್ದು, ಜನರ ಓಡಾಟಕ್ಕೆ ಅವಕಾಶ ಇರುವುದಿಲ್ಲ. ಹಾಲು, ಔಷಧಿ ಅಂಗಡಿ ಮಾತ್ರ ತೆರೆದಿರುತ್ತದೆ.

ಗುಜರಾತ್ ಸರಕಾರ ನ.23ರಿಂದ ಮಾಧ್ಯಮಿಕ ಶಾಲೆ ಮತ್ತು ಕಾಲೇಜುಗಳನ್ನು ತೆರೆಯಲು ನಿರ್ಧರಿಸಿತ್ತು. ಆದರೆ, ಈಗ ಈ ನಿರ್ಧಾರ ತಡೆ ಹಿಡಿಯಲಾಗಿದೆ. ಸೋಮವಾರದಿಂದ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ರಾತ್ರಿ ಕರ್ಫ್ಯೂ ವಿಧಿಸಲು ನಿರ್ಧರಿಸಲಾಗಿದೆ.   

- Advertisement -