ಆದಿ ದ್ರಾವಿಡ ಕಲ್ಯಾಣಕ್ಕಾಗಿ ನೂತನ ಪ್ರಾಧಿಕಾರ: ತಮಿಳ್ನಾಡು ಸಿಎಂ ಎಮ್.ಕೆ ಸ್ಟಾಲಿನ್

Prasthutha|

ಚೆನ್ನೈ: ಕಾನೂನು ಹಕ್ಕುಗಳನ್ನು ರಕ್ಷಿಸಲು ಮತ್ತು ಪರಿಶಿಷ್ಟ ಜಾತಿಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸ್ವಾಯತ್ತ ತಮಿಳ್ನಾಡು ಆದಿ ದ್ರಾವಿಡ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಪ್ರಾಧಿಕಾರವನ್ನು ಸ್ಥಾಪಿಸಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಶೀಘ್ರವೇ ಕಾನೂನು ರೂಪಿಸಲಿದೆಯೆಂದು ಮುಖ್ಯಮಂತ್ರಿ ಎಮ್.ಕೆ ಸ್ಟಾಲಿನ್ ತಿಳಿಸಿದರು.

ಪ್ರಸ್ತುತ ಅಧಿವೇಶನದಲ್ಲಿ ಈ ಸಂಬಂಧ ಮಸೂದೆಯನ್ನು ಮಂಡಿಸಲು ಯೋಜನೆಯನ್ನು ಹಮ್ಮಿಕೊಂಡಿದ್ದಾರೆ.

- Advertisement -

ಆದಿ ದ್ರಾವಿಡರ ಕಲ್ಯಾಣ ಇಲಾಖೆ ನಡೆಸುತ್ತಿರುವ ಶಾಲೆಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕಳೆದ ತಿಂಗಳು ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಮೇಲ್ವಿಚಾರಣಾ ಸಮಿತಿಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿತ್ತು. ಮಾತ್ರವಲ್ಲ ಶಾಲೆಯ ಶಿಕ್ಷಕರಿಗೆ ವಿಶೇಷವಾಗಿ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುವುದೆಂದು ಅವರು ಘೋಷಿಸಿದರು.

ನಾಗರಿಕ ಹಕ್ಕುಗಳ ರಕ್ಷಣೆಯ ಅಡಿಯಲ್ಲಿ ದಾಖಲಾದ ಪ್ರಕರಣವನ್ನು ವಿಚಾರಣೆ ನಡೆಸುವ ನಿಟ್ಟಿನಲ್ಲಿ ಸೇಲಂ, ಕೃಷ್ಣಗಿರಿ,ಮಧುರೈ ಮತ್ತು ತಿರುನೆಲ್ವೇಲಿಯಲ್ಲಿ ತಲಾ ಒಂದು ಹೆಚ್ಚುವರಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ಪ್ರಸ್ತಾಪಿಸಿದರು.

ಸ್ಮಶಾನದಲ್ಲಿ ಜಾತಿ ತಾರತಮ್ಯವನ್ನು ತೊಡೆದುಹಾಕಲು ಆದ್ಯತೆ ನೀಡುವ ಗ್ರಾಮಗಳಿಗೆ ಸಿಎಂ 10 ಲಕ್ಷ ಬಹುಮಾನವನ್ನು ಘೋಷಿಸಿದರು. ಮಾತ್ರವಲ್ಲ ತಾರತಮ್ಯದ ಅಧಾರದಲ್ಲಿ ಸಂತ್ರಸ್ತರಿಗೆ ಪರಿಹಾರ ಧನವನ್ನು ಕನಿಷ್ಠ 1 ಲಕ್ಷದಿಂದ ಗರಿಷ್ಠ 12 ಏರಿಸಿದರು.

- Advertisement -