ನೇಪಾಳ ಪ್ರಧಾನಿಯೇ ಪಕ್ಷದಿಂದ ವಜಾ | ಕಮ್ಯುನಿಸ್ಟ್ ಪಾರ್ಟಿ ಇಬ್ಭಾಗ; ರಾಜಕೀಯ ಪ್ರಕ್ಷುಬ್ಧತೆ

Prasthutha|

ಕಾಠ್ಮಂಡು : ನೇಪಾಳದ ಆಡಳಿತಾರೂಢ ಪಕ್ಷ ನೇಪಾಳ ಕಮ್ಯುನಿಸ್ಟ್ ಪಾರ್ಟಿ (ಎನ್ ಸಿಪಿ)ಯೊಳಗಿನ ವಿರೋಧಿ ಬಣ, ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಪಕ್ಷದಿಂದ ವಜಾ ಮಾಡಿದೆ. ಸಂಸತ್ತಿನ ಕೆಳಮನೆಯನ್ನು ವಿಸರ್ಜನೆ ಮಾಡುವ ಅವರ ನಿರ್ಧಾರದ ಬಳಿಕ, ಸೃಷ್ಟಿಯಾಗಿರುವ ತೀವ್ರ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಪಕ್ಷ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

- Advertisement -

“ಇಂದು ನಡೆದ ಪಕ್ಷದ ಕೇಂದ್ರ ಸಮಿತಿ ಸಭೆಯಲ್ಲಿ ಕೆ.ಪಿ. ಶರ್ಮಾ ಓಲಿ ಅವರನ್ನು ಪಕ್ಷದಿಂದ ವಜಾ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಅವರು ಇನ್ನುಮುಂದೆ ಪಕ್ಷದ ಸಾಮಾನ್ಯ ಸದಸ್ಯತ್ವವನ್ನೂ ಹೊಂದಿರುವುದಿಲ್ಲ” ಎಂದು ಪಕ್ಷದ ವಿರೋಧಿ ಬಣದ ವಕ್ತಾರ ನಾರಾಯಣ್ ಕಾಜಿ ಶ್ರೇಷ್ಠ ಹೇಳಿದ್ದಾರೆ.

ಅಸಂವಿಧಾನಿ ನಿರ್ಧಾರ ಕೈಗೊಂಡಿರುವುದಕ್ಕಾಗಿ ಪ್ರಧಾನಿ ಓಲಿ ಅವರನ್ನು ಪಕ್ಷದಿಂದ ಯಾಕೆ ತೆಗೆಯಬಾರದು? ಎಂದು ಮಾಜಿ ಪ್ರಧಾನಿ ಪುಷ್ಪಕಮಲ್ ದಹಾಲ್ ಮತ್ತು ಮಾಧವ್ ಕುಮಾರ್ ನೇಪಾಳ್ ಬಣ ಪ್ರಶ್ನಿಸಿದ ಬೆನ್ನಲ್ಲೇ, ಈ ಕ್ರಮ ಕೈಗೊಳ್ಳಲಾಗಿದೆ.

- Advertisement -

ಪಕ್ಷದೊಳಗೆ ತೀವ್ರ ಭಿನ್ನಮತ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ, ಇದೀಗ ಎನ್ ಸಿಪಿಯಲ್ಲಿ ಎರಡು ಬಣಗಳಾಗಿವೆ. ಎರಡೂ ಬಣಗಳು ತಮ್ಮದು ಅಧಿಕೃತ ಬಣವೆಂದು ಪ್ರತಿಪಾದಿಸುತ್ತಿವೆ. ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ತೀವ್ರಗೊಂಡಿದ್ದ ಹಿನ್ನೆಲೆಯಲ್ಲಿ, ಪ್ರಧಾನಿ ಓಲಿ ಅವರು ಕಳೆದ ಡಿ.20ರಂದು ಸಂಸತ್ ವಿಸರ್ಜನೆಗೆ ನಿರ್ಧರಿಸಿದ್ದರು. ಈ ನಿರ್ಧಾರವನ್ನು ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ಅನುಮೋದಿಸಿದ್ದರು. ಮುಂದಿನ ಏಪ್ರಿಲ್, ಮೇ ವೇಳೆಗೆ ಹೊಸ ಚುನಾವಣೆ ನಡೆಯುವ ನಿರೀಕ್ಷೆಯಿದೆ.    



Join Whatsapp