ಖಾಸಗಿ ಸಂಸ್ಥೆಯ ಸೆಕ್ಯೂರಿಟಿ ಗಾರ್ಡ್​ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆ

Prasthutha|

ಬೆಂಗಳೂರು: ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿರುವ ಸ್ಟೀಲ್ ಪ್ರೊಫೈಲ್ ಕೈಗಾರಿಕೆಯಲ್ಲಿ ಎರಡುವರೆ ವರ್ಷದಿಂದ ಕೆಲಸ ಮಾಡುತ್ತಿದ್ದ 40 ವರ್ಷದ ಸಾಬಪ್ಪ ಲಗಳಿ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

- Advertisement -

ಇದೀಗ ಇವರ ಸಾವಿನ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿದೆ.

ಮೃತ ಸಾಬಪ್ಪ ರೈನ್‌ಬೋ ಹೆಸರಿನ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಎರಡುವರೆ ವರ್ಷಗಳಿಂದ ಸ್ಟೀಲ್‌ ಪ್ರೊಫೈಲ್ ಕಾರ್ಖಾನೆಯಲ್ಲಿಯೇ ಕೆಲಸ ಮಾಡುತ್ತಿದ್ದ. ಎಂದಿನಂತೆ ಮೇ.18ರಂದು ರಾತ್ರಿ ಪಾಳಿಯಲ್ಲಿ ಸೆಕ್ಯುರಿಟಿ ಕೆಲಸ ಮಾಡಿದ್ದಾರೆ.. ಮತ್ತೆ ಮುಂಜಾನೆ ಪಾಳಿ ಮುಂದುವರೆಸು ಎಂದು ಸಂಸ್ಥೆಯವರು ಹೇಳಿದ್ದರಂತೆ. ಈ ವೇಳೆ ಶೌಚಾಲಯಕ್ಕೆ ತೆರಳಿದ್ದ ಸಾಬಪ್ಪ ಶೌಚಾಲಯದಲ್ಲೆ ಅಂಗಾತ ಬಿದ್ದಿದ್ದಾನೆ. ಎಷ್ಟೋತ್ತಾದರು ಬರಲಿಲ್ಲವೆಂದು ಸಹೋದ್ಯೋಗಿಗಳು ನೋಡಿದಾಗ ಸಾಬಪ್ಪ ಸಾವನ್ನಪ್ಪಿರುವುದು ದೃಢಪಟ್ಟಿದೆ.

- Advertisement -

ಒಟ್ಟಿನಲ್ಲಿ ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದವನನ್ನು ಕಳೆದುಕೊಂಡ ಕುಟುಂಬದ ರೋಧನ ಮುಗಿಲು ಮುಟ್ಟಿದೆ.

ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Join Whatsapp