ಹಿಂದೂ ಸಮಾಜವನ್ನು ಉಳಿಸಲು ಶಾಸ್ತ್ರದ ಜೊತೆಗೆ ಶಸ್ತ್ರದ ಅಗತ್ಯವಿದೆ: ಕಲ್ಲಡ್ಕ ಭಟ್ಟರಿಂದ ಮತ್ತೊಮ್ಮೆ ದ್ವೇಷ ಭಾಷಣ

Prasthutha|

ಶಿವಮೊಗ್ಗ: ಮುಸ್ಲಿಮರು ಎಂದರೆ ಕಾಮುಕರು. ಅವರಿಗೆ ಪ್ರೀತಿ, ಪ್ರೇಮದ ವಿಷಯ ಗೊತ್ತಿಲ್ಲ. ಇಸ್ಲಾಮ್ ಗೆ ಮತಾಂತರಗೊಳಿಸುವ ಉದ್ದೇಶದಿಂದಲೇ ಬೇರೆ ಧರ್ಮದವರನ್ನು ಮದುವೆಯಾಗುತ್ತಾರೆ ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

- Advertisement -

ಸಾಗರದ ಗಾಂಧಿ ಮೈದಾನದಲ್ಲಿವಿಶ್ವ ಹಿಂದೂ ಪರಿಷತ್, ಬಜರಂಗ ದಳ ಶಿವಾಜಿ ಜಯಂತಿ ಆಚರಣೆ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಭಟ್ ಮಾಡಿದ ಕೋಮು ದ್ವೇಷ ಭಾಷಣದ ಕೆಲವೊಂದು ತುಣುಕುಗಳು ಈ ಕೆಳಗಿನಂತಿವೆ.

ಜಗತ್ತಿನಲ್ಲಿ ಅತ್ಯಂತ ಜಾತ್ಯತೀತ ಧರ್ಮವಿದ್ದರೆ ಅದು ಹಿಂದೂ ಧರ್ಮ ಮಾತ್ರ. ಉಳಿದವು ಕೇವಲ ಪೂಜೆಯ ಪದ್ಧತಿಯನ್ನು ಬೋಧಿಸುತ್ತವೆ. ಹಾಗಾಗಿ ಅವು ಧರ್ಮಗಳೇ ಅಲ್ಲ . ಶಿವಾಜಿ, ಕೃಷ್ಣದೇವರಾಯ, ಝಾನ್ಸಿರಾಣಿ ಲಕ್ಷ್ಮೀಬಾಯಿ, ರಾಣಾ ಪ್ರತಾಪ್ ಸಿಂಗ್ ಮೊದಲಾದ ಉದಾತ್ತ ನಾಯಕರ ಚರಿತ್ರೆಯನ್ನು ಬದಿಗೊತ್ತಿ ಅಕ್ಬರ್ ನಂತಹ ಫಟಿಂಗ ರಾಜನನ್ನು ವೈಭವೀಕರಿಸುವ ಚರಿತ್ರೆಯನ್ನು ನಾವು ಓದುತ್ತಿದ್ದೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

- Advertisement -

ಹಿಂದೂಗಳಾದ ನಾವು ಪುರಾಣ ಕೇಳಿಕೊಂಡು ಪೂಜೆ ಮಾಡುತ್ತ ಕುಳಿತರೆ ಸಾಲದು. ಹಿಂದೂ ಸಮಾಜವನ್ನು ಉಳಿಸಲು ಶಾಸ್ತ್ರದ ಜೊತೆಗೆ ಶಸ್ತ್ರದ ಅಗತ್ಯವೂ ಇದೆ. ಭಾರತದಲ್ಲಿರುವ ಯಾವುದೇ ಮಸೀದಿ ಅಥವಾ ಚರ್ಚ್ ಆಯಾ ಧರ್ಮದವರಿಗೆ ಸೇರಿದ್ದಲ್ಲ, ಅವೆಲ್ಲವೂ ಈ ನೆಲದ ಆಸ್ತಿಯಾಗಿದೆ. ಕೆಲವು ರಾಜಕೀಯ ಪಕ್ಷಗಳಿಗೆ ಈ ಸತ್ಯವನ್ನು ಹೇಳುವ ಧೈರ್ಯವಿಲ್ಲ. ಭಾರತದ ಧ್ವಜ ಕೇಸರಿ ಬಣ್ಣದ್ದಾಗಿರಬೇಕು ಎಂಬ ಬಗ್ಗೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲೇ ಪ್ರಸ್ತಾಪಿಸಲಾಗಿತ್ತು. ಈ ದೇಶವೇ ಕೇಸರಿಯಾಗಿರುವಾಗ ಕೇಸರೀಕರಣ ಮಾಡುವ ಪ್ರಶ್ನೆ ಎಲ್ಲಿಂದ ಉದ್ಭವವಾಗುತ್ತದೆ ಎಂದು ವಿತಂಡವಾದ ಮುಂದಿಟ್ಟಿದ್ದಾರೆ.

ಮತಾಂತರ ಭಾರತಕ್ಕೆ ಗಂಡಾಂತರವಾಗಿದ್ದು, ಅಂಬೇಡ್ಕರ್ ಹೇಳಿದಂತೆ ದೇಶ ವಿಭಜನೆ ಸಂದರ್ಭದಲ್ಲಿ ಮುಸ್ಲಿಮರೆಲ್ಲ ಪಾಕಿಸ್ತಾನಕ್ಕೆ ತೆರಳಿ ಹಿಂದೂಗಳು ಮಾತ್ರ ಭಾರತದಲ್ಲಿ ಉಳಿದಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಹೊರಗಿನಿಂದ ಬಂದ ಧರ್ಮಗಳನ್ನು ತಿರಸ್ಕರಿಸಿ ಭಾರತದ್ದೇ ಆದ ಬೌದ್ಧ ಧರ್ಮವನ್ನು ಸ್ವೀಕರಿಸಿದ ಅಂಬೇಡ್ಕರ್ ಅಪ್ಪಟ ದೇಶಭಕ್ತ. ಷರಿಯತ್ ಕಾನೂನಿನ ಪ್ರಕಾರ ಕಳ್ಳತನ ಮಾಡಿದವರ ಕೈಯನ್ನು ಕತ್ತರಿಸಬೇಕು ಎಂದಿದೆ. ಇದನ್ನು ಯಥಾವತ್ತಾಗಿ ಪಾಲಿಸಿದರೆ ದೇಶದಲ್ಲಿ ಯಾವ ಮುಸ್ಲಿಂ ಕೂಡ ಉಳಿಯುವುದಿಲ್ಲ. ಹಿಜಾಬ್ ವಿವಾದದ ಹಿಂದೆ ಭಯೋತ್ಪಾದಕ ಸಂಘಟನೆಗಳ ಷಡ್ಯಂತ್ರ ಅಡಗಿದೆ. ಹಿಜಾಬ್ ಇಸ್ಲಾಂನ ಅಗತ್ಯ ಆಚರಣೆ ಅಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದ ನಂತರವೂ ಮುಸ್ಲಿಂ ಸಮುದಾಯದ ಸಂಘಟನೆ ಬಂದ್ ಗೆ ಕರೆ ನೀಡಿರುವುದು ಎಷ್ಟು ಸರಿ. ಈ ಮೂಲಕ ಎರಡನೇ ದೇಶ ವಿಭಜನೆಯ ವಿಷಬೀಜ ಬಿತ್ತಲಾಗುತ್ತಿದೆ. ಮುಸ್ಲಿಮರು ಬಿಜೆಪಿಗೆ ಮತ ನೀಡದೇ ಇರುವಾಗ ಆ ಪಕ್ಷಕ್ಕೆ ಅಲ್ಪಸಂಖ್ಯಾತ ಘಟಕ ಎಂದು ಇರುವುದಾದರೂ ಏಕೆ ಎಂದು ಪ್ರಶ್ನಿಸಿದರು.



Join Whatsapp