ಬಿಜೆಪಿಯನ್ನು ಯಾರು ಅಧಿಕಾರಕ್ಕೆ ತಂದರೋ ಗೊತ್ತಿಲ್ಲ: ಕೇಂದ್ರದ ವಿರುದ್ಧ ಜಯಾ ಬಚ್ಚನ್ ವಾಗ್ದಾಳಿ

Prasthutha|

ಮುಂಬೈ: ದೇಶದಲ್ಲಿ ಏರಿಕೆ ಕಂಡಿರುವ ಇಂಧನ ಬೆಲೆಯ ಬಗ್ಗೆ ಕಿಡಿಕಾರಿರುವ ರಾಜ್ಯಸಭಾ ಸದಸ್ಯೆ  ಜಯಾ ಬಚ್ಚನ್, ಬಿಜೆಪಿಯನ್ನು ಯಾರು ಅಧಿಕಾರಕ್ಕೆ ತಂದರೋ ಗೊತ್ತಿಲ್ಲ ಎಂದಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಸ್ಥಿರವಾಗಿದ್ದ ಇಂದನ ಬೆಲೆ ಇದೀಗ ಹಠಾತ್ತನೇ ಏರಿಕೆ ಕಂಡಿದೆ, ಇವರನ್ನು ಅಧಿಕಾರಕ್ಕೆ ತಂದವರ್ಯಾರೋ ಎಂದು ಬಚ್ಚನ್ ಪ್ರಶ್ನಿಸಿದ್ದಾರೆ.

- Advertisement -

ಪಂಚ ರಾಜ್ಯ ಚುನಾವಣೆಯ ವೇಳೆ ಅಖಿಲೇಶ್ ಯಾದವ್ ಚುನಾವಣಾ ಪ್ರಚಾರದ ವೇಳೆ ಮತದಾರರೇ ಎಚ್ಚರದಿಂದಿರಿ, ಚುನಾವಣೆಯ ನಂತರ ಬೆಲೆಗಳು ಹೆಚ್ಚಾಗಲಿದವೆ ಎಂದು ಎಚ್ಚರಿಸಿದ್ದರು, ಈಗ ಸರಕಾರ ಅದನ್ನೇ ಮಾಡುತ್ತಿದೆ ಎಂದು ಹೇಳಿದರು.

Join Whatsapp