6000 ರಷ್ಯಾ ಸೈನಿಕರನ್ನು ಕೊಂದಿದ್ದೇವೆ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

Prasthutha|

ಕೀವ್: ಪ್ರಸಕ್ತ ರಷ್ಯಾ – ಉಕ್ರೇನ್ ಭೀಕರ ಯುದ್ಧದ ನಡುವೆ ವೀಡಿಯೋದ ಮೂಲಕ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಇದುವರೆಗೆ ಉಕ್ರೇನ್ ಕನಿಷ್ಠ 6000 ರಷ್ಯಾದ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

- Advertisement -

ಸದ್ಯ ಉಕ್ರೇನ್’ನ ಇತಿಹಾಸ, ಅಲ್ಲಿನ ಜನತೆ ಮತ್ತು ಸಂಸ್ಕೃತಿಯನ್ನು ನಾಶಪಡಿಸುವ ಗುರಿಯನ್ನು ರಷ್ಯಾ ಹೊಂದಿದ್ದು, ಸತತ ಏಳೆನೇ ದಿನ ನಿರಂತರ ಕಪ್ಪು ಸಮುದ್ರದ ಬಂದರಿನ ಮೇಲೆ ಭಾರೀ ಶೆಲ್ ದಾಳಿ ಪ್ರಾರಂಭಿಸಿದೆ. ಇದರ ಹೊರತಾಗಿಯೂ ಉಕ್ರೇನ್ ಸುಮಾರು 6000 ರಷ್ಯಾದ ಸೈನಿಕರನ್ನು ಕೊಲ್ಲಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ನಡುವೆ ಗಡ್ಡ ಬಿಟ್ಟ, ಖಾಕಿ ಟಿ-ಶರ್ಟ್ ಧರಿಸಿರುವ ಝೆಲೆನ್ಸ್ಕಿ ಅವರು ಉಕ್ರೇನ್’ಗೆ ಹೆಚ್ಚಿನ ಪ್ರಮಾಣದಲ್ಲಿ ಪಾಶ್ಚಿಮಾತ್ಯದ ಬೆಂಬಲ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವುದು ಸೇರಿದಂತೆ ಹೆಚ್ಚಿನ ಅಂತಾರಾಷ್ಟ್ರೀಯ ಬೆಂಬಲಕ್ಕಾಗಿ ಅವರು ಕರೆ ನೀಡಿದ್ದಾರೆ.

- Advertisement -

ಉಕ್ರೇನ್ ಮೇಲೆ ದಾಳಿ ಮಾಡುತ್ತಿರುವ ರಷ್ಯಾದ ನಡೆಯನ್ನು ವಿರೋಧಿಸಿ ಮಾಸ್ಕೋದಲ್ಲಿ ಪ್ರತಿಭಟನೆ ಆರಂಭವಾಗಿದೆ. ರಷ್ಯಾದ ಮೇಲೆ ಒತ್ತಡ ಹೇರುವ ಸಲುವಾಗಿ ಆರ್ಥಿಕ ದಿಗ್ಬಂಧನ ಬಿಗಿಗೊಳಿಸುವಂತೆ ರಷ್ಯಯನ್ನರು ಒತ್ತಾಯಿಸಿದ್ದಾರೆ.

ಎರಡನೇ ಮಹಾಯುದ್ಧ ಸಂದರ್ಭದಲ್ಲಿ ಜರ್ಮನ್ ಪಡೆಗಳು, ಉಕ್ರೇನ್ ನೆರವಿನೊಂದಿಗೆ ಹತ್ತಾರು ಸಾವಿರ ಯಹೂದಿಗಳ ಹತ್ಯಾಕಾಂಡ ನಡೆಸಿತ್ತು ಎಂದು ಝೆಲೆನ್ಸ್ಕಿ ನೆನಪಿಸಿದ್ದಾರೆ.

Join Whatsapp