ಟ್ವಿಟರ್‌ ನಿಂದ ವಾರದೊಳಗೆ ಅಶ್ಲೀಲ ವೀಡಿಯೊಗಳನ್ನು ತೆಗೆಯುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

Prasthutha|

ನವದೆಹಲಿ : ಒಂದು ವಾರದೊಳಗೆ ಮೈಕ್ರೊಬ್ಲಾಗಿಂಗ್‌ ವೆಬ್‌ ಸೈಟ್‌ ಟ್ವಿಟರ್‌ ನಿಂದ ಎಲ್ಲಾ ರೀತಿಯ ಅಶ್ಲೀಲ ವೀಡಿಯೊಗಳನ್ನು ತೆಗೆಯುವಂತೆ ರಾಷ್ಟ್ರೀಯ ಮಹಿಳಾ ಆಯೋಗ ನಿರ್ದೇಶಿಸಿದೆ.

- Advertisement -

ಈ ಸಂಬಂಧ ಟ್ವಿಟರ್‌ ಇಂಡಿಯಾ ಆಡಳಿತ ನಿರ್ದೇಶಕರಿಗೆ ಪತ್ರ ಬರೆದಿರುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ. ಟ್ವಿಟರ್‌ ನಿಂದ ಎಲ್ಲಾ ರೀತಿಯ ಅಶ್ಲೀಲ ವೀಡಿಯೊ, ಅಶ್ಲೀಲ ಅಂಶಗಳನ್ನು ತೆಗೆದುಹಾಕುವಂತೆ ಅವರು ಸೂಚಿಸಿದ್ದಾರೆ.

ವಿಷಯಕ್ಕೆ ಸಂಬಂಧಿಸಿ ಗಮನ ಹರಿಸಿ, ಟ್ವಿಟರ್‌ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಅವರು ದೆಹಲಿ ಪೊಲೀಸ್‌ ಆಯುಕ್ತರಿಗೂ ಪತ್ರ ಬರೆದಿದ್ದಾರೆ.   



Join Whatsapp