ಅಲ್ಪಸಂಖ್ಯಾತ ಶಾಲೆಗಳಲ್ಲಿ ಕೇವಲ ಶೇ.22.75ರಷ್ಟು ಮಾತ್ರ ಮುಸ್ಲಿಮರ ಪಾಲು: NCPCR ವರದಿ

Prasthutha|

ನವದೆಹಲಿ: ಧಾರ್ಮಿಕ ಅಲ್ಪಸಂಖ್ಯಾತರ ಪೈಕಿ ಶೇಕಡಾ 69.18ರಷ್ಟಿರುವ ಮುಸ್ಲಿಮರು, ಒಟ್ಟು ಮುಸ್ಲಿಮ್ ಅಲ್ಪಸಂಖ್ಯಾತ ಶಾಲೆಗಳಲ್ಲಿ ಕೇವಲ 22.27ರಷ್ಟು ಮಾತ್ರ ಪಾಲು ಹೊಂದಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ-ಎನ್ ಸಿಪಿಸಿಆರ್ ಹೇಳಿದೆ.

- Advertisement -


ಒಟ್ಟು ಅಲ್ಪಸಂಖ್ಯಾತ ಜನಸಂಖ್ಯೆಯಲ್ಲಿ ಶೇ.11.54ರಷ್ಟಿರುವ ಕ್ರಿಶ್ಚಿಯನ್ ಸಮುದಾಯವು, ದೇಶದ ಒಟ್ಟು ಧಾರ್ಮಿಕ ಅಲ್ಪಸಂಖ್ಯಾತ ಶಾಲೆಗಳಲ್ಲಿ ಶೇಕಡಾ 71.96ರಷ್ಟು ಪಾಲು ಹೊಂದಿದೆ. ಸಿಖ್ ಸಮುದಾಯವು ಒಟ್ಟು ಧಾರ್ಮಿಕ ಅಲ್ಪಸಂಖ್ಯಾತ ಜನಸಂಖ್ಯೆಯಲ್ಲಿ 9.78% ರಷ್ಟಿದ್ದು, ಧಾರ್ಮಿಕ ಅಲ್ಪಸಂಖ್ಯಾತ ಶಾಲೆಗಳಲ್ಲಿ ಶೇಕಡಾ 1.54ರಷ್ಟು ಪಾಲು ಹೊಂದಿದ್ದರೆ, ಜನಸಂಖ್ಯೆಯಲ್ಲಿ ಶೇ .1.90 ರಷ್ಟಿರುವ ಜೈನ ಸಮುದಾಯವು ಧಾರ್ಮಿಕ ಅಲ್ಪಸಂಖ್ಯಾತ ಶಾಲೆಗಳಲ್ಲಿ ಶೇ .1.56 ರಷ್ಟು ಪಾಲು ಹೊಂದಿದೆ.


ಒಟ್ಟು ಧಾರ್ಮಿಕ ಜನಸಂಖ್ಯೆಯಲ್ಲಿ ಶೇ.0.03 ರಷ್ಟಿರುವ ಪಾರ್ಸಿ ಸಮುದಾಯವು ದೇಶದ ಒಟ್ಟು ಧಾರ್ಮಿಕ ಅಲ್ಪಸಂಖ್ಯಾತ ಶಾಲೆಗಳಲ್ಲಿ 0.38% ನ ಪಾಲು ಹೊಂದಿದೆ. ವರದಿಯ ಪ್ರಕಾರ, 4085 ಅಲ್ಪಸಂಖ್ಯಾತ ಶಾಲೆಗಳನ್ನು ಮುಸ್ಲಿಮರು ನಡೆಸುತ್ತಾರೆ. 12920 ಅಲ್ಪಸಂಖ್ಯಾತ ಶಾಲೆಗಳನ್ನು ಕ್ರಿಶ್ಚಿಯನ್ನರು ನಡೆಸುತ್ತಿದ್ದಾರೆ.

- Advertisement -


ಇತರ ಅಲ್ಪಸಂಖ್ಯಾತ ಸಮುದಾಯಗಳು ನಡೆಸುತ್ತಿರುವ ಶಾಲೆಗಳಿಗೆ ಹೋಲಿಸಿದರೆ ಮುಸ್ಲಿಂ ಸಮುದಾಯ ನಡೆಸಲ್ಪಡುವ ಶಾಲೆಗಳಲ್ಲಿ ಮುಸ್ಲಿಂ ಸಮುದಾಯದ ಹೆಚ್ಚಿನ ಮಕ್ಕಳು ದಾಖಲಾತಿ ಹೊಂದಿದ್ದಾರೆ. ಕ್ರಿಶ್ಚಿಯನ್ ಶಾಲೆಗಳು ಅತ್ಯಧಿಕ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಲ್ಲದ ಶಾಲೆಗಳನ್ನು ಹೊಂದಿವೆ.


ಮುಸ್ಲಿಂ ಸಮುದಾಯವು ನಡೆಸುತ್ತಿರುವ ಶಾಲೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಕ್ಕಳ ಸಂಖ್ಯೆ ಶೇಕಡಾ 75% ಕ್ಕಿಂತ ಹೆಚ್ಚಿದೆ. ಮತ್ತೊಂದೆಡೆ, ಜೈನ ಸಮುದಾಯವು ನಡೆಸುವ ಶಾಲೆಗಳಲ್ಲಿ ಜೈನ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 20% ಕ್ಕಿಂತ ಕಡಿಮೆ ಇದೆ. ಸಿಖ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ಶಾಲೆಗಳಲ್ಲಿ ಆಯಾ ಅಲ್ಪಸಂಖ್ಯಾತ ಸಮುದಾಯಗಳ 30% ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿವೆ. ಒಟ್ಟಾರೆಯಾಗಿ, ಅಲ್ಪಸಂಖ್ಯಾತ ಶಾಲೆಗಳಲ್ಲಿ ಕೇವಲ 7.95ರಷ್ಟು ಅಲ್ಪಸಂಖ್ಯಾತ ಮಕ್ಕಳ ದಾಖಲಾತಿ ಇದೆ ಎಂದು ವರದಿ ತಿಳಿಸಿದೆ.



Join Whatsapp