ದಲಿತ ಬಾಲಕಿ ಕುಟುಂಬದ ಜೊತೆ ರಾಹುಲ್ ಗಾಂಧಿ ಫೋಟೋ | ಟ್ವಿಟ್ಟರ್ ಇಂಡಿಯಾಗೆ NCPCR ನೋಟೀಸ್

Prasthutha|

ನವದೆಹಲಿ: ಅತ್ಯಾಚಾರಕ್ಕೊಳಗಾಗಿ ಸಾವೀಗೀಡಾದ ದಲಿತ ಬಾಲಕಿಯ ಕುಟುಂಬಿಕರನ್ನು ಭೇಟಿ ಆಗಿದ್ದರ ಫೋಟೋ ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಟ್ವಿಟ್ಟರ್ ಇಂಡಿಯಾಗೆ ನೋಟೀಸ್ ಜಾರಿಗೊಳಿಸಿದೆ.

- Advertisement -

ಸಂತ್ರಸ್ತ ಕುಟುಂಬಿಕರ ಜೊತೆ ಮಾತನಾಡುವ ವೇಳೆ ರಾಹುಲ್ ಗಾಂಧಿ ಕ್ಲಿಕ್ಕಿಸಿಕೊಂಡಿದ್ದ ಫೋಟೋವನ್ನ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದರು. ಇದು ಪೋಕ್ಸೋ ಕಾಯ್ದೆಯ ಉಲ್ಲಂಘನೆ ಎಂದು ಆಯೋಗವು ಎಚ್ಚರಿಸಿದೆ.

ಅಲ್ಲದೇ, ತಕ್ಷಣವೇ ಈ ಕುರಿತು ರಾಹುಲ್ ಗಾಂಧಿ ಅವರ ಗಮನಕ್ಕೆ ತಂದು ಆ ಫೋಟೋವನ್ನ ಅಳಿಸಿ ಹಾಕುವಂತೆ ಸೂಚನೆ ನೀಡುವಂತೆ ಟ್ವಿಟ್ಟರ್ ಇಂಡಿಯಾಗೆ ಆಯೋಗವು ಸೂಚಿಸಿದೆ.

- Advertisement -

ಟ್ವಿಟ್ಟರ್ ಇಂಡಿಯಾದ ಕುಂದುಕೊರತೆ ಅಧಿಕಾರಿಯ ವಿಳಾಸಕ್ಕೆ ನೋಟೀಸ್ ಜಾರಿಗೊಳಿಸಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು, ಪೋಕ್ಸೋ ಕಾಯ್ದೆ ಅನ್ವಯ ಯಾವುದೇ ಮಾಧ್ಯಮಗಳ ಮೂಲಕವಾಗಲೀ ಸಂತ್ರಸ್ತರ ಕುಟುಂಬಿಕರನ್ನ ಗೊತ್ತುಪಡಿಸುವಂತಿಲ್ಲ. ಇದು ಕಾನೂನಿನ ಉಲ್ಲಂಘನೆ ಆಗಿರುತ್ತದೆ ಎಂದು ಟ್ವಿಟ್ಟರ್ ಇಂಡಿಯಾಗೆ ಆಯೋಗವು ಪರೋಕ್ಷವಾಗಿ ಎಚ್ಚರಿಸಿದೆ.

ಇಂದು ಬೆಳಿಗ್ಗೆ ಸಂತ್ರಸ್ತ ಕುಟುಂಬಿಕರನ್ನ ಭೇಟಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುಟುಂಬಿಕರಿಗೆ ಸಾಂತ್ವನ ತಿಳಿಸಿದ್ದರು. ಈ ಕುರಿತ ಪೋಸ್ಟ್ ಅನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

Join Whatsapp