ಶಿವಸೇನೆ ಭಿನ್ನಮತದ ಬಗ್ಗೆ ಉದ್ಧವ್’ಗೆ ಎಚ್ಚರಿಕೆ ನೀಡಿದ ಎನ್’ಸಿಪಿ ನಾಯಕ

Prasthutha|

ಮುಂಬೈ: ನಿಮ್ಮ ಪಕ್ಷದಲ್ಲಿ ಒಳಗಿಂದೊಳಗೆ ಭಿನ್ನಮತವಿದೆ, ಗಮನಿಸದಿದ್ದರೆ ಅಪಾಯ ಎಂದು ಎನ್’ಸಿಪಿ – ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರನ್ನು ಎಚ್ಚರಿಸಿದ್ದಾರೆ.

- Advertisement -


ಕಳೆದ ಜೂನ್’ನಲ್ಲಿ ಶಿವಸೇನೆಯ ಶಾಸಕರು ಏಕನಾಥ ಶಿಂಧೆ ಹಿಂದೆ ಬಿಜೆಪಿಗೆ ಮಾರಾಟವಾದುದರಿಂದ ಮಹಾರಾಷ್ಟ್ರದ ಎಂವಿಎ- ಮಹಾರಾಷ್ಟ್ರ ವಿಕಾಸ ಅಘಾಡಿ ಸರಕಾರವು ಬಿದ್ದು ಬಿಜೆಪಿ ಶಿವಸೇನೆ ಬಂಡಾಯಗಾರರ ಸರಕಾರ ಬಂದುದನ್ನು ನೆನಪಿಸಿದ್ದಾರೆ.


ಲೋಕ ಮತಕ್ಕೆ ನೀಡಿದ ಸಂದರ್ಶನದಲ್ಲಿ ಅಜಿತ್ ಪವಾರ್ ಅವರು ಈಗಲೂ ಮತ್ತಷ್ಟು ಬಂಡಾಯಗಾರರು ಶಿವಸೇನೆಯಲ್ಲಿ ಹುಟ್ಟಿಕೊಳ್ಳುವ ಸೂಚನೆ ಇದೆ ಎಂದು ಹೇಳಿದ್ದಾರೆ.
“ಈ ಬಗ್ಗೆ ಶರದ್ ಪವಾರ್ ಅವರೆ ಉದ್ಧವ್’ರಿಗೆ ಎಚ್ಚರಿಕೆ ನೀಡಿದ್ದಾರೆ. ನನ್ನ ಶಾಸಕರ ಮೇಲೆ ನಂಬಿಕೆಯಿದೆ. ಈಗ ಬಂಡಾಯಗಾರರು ಯಾರೂ ಇಲ್ಲವೆಂದು ಠಾಕ್ರೆ ಉತ್ತರಿಸಿದ್ದಾರೆ” ಎಂದು ಅಜಿತ್ ಪವಾರ್ ಹೇಳಿದರು.

- Advertisement -


15- 16 ಎಂದಿದ್ದದ್ದು ಕೊನೆಗೆ ಶಿವಸೇನೆಯ 55 ಶಾಸಕರಲ್ಲಿ 40 ಮಂದಿಯೇ ಬಣ ಬದಲಾಯಿಸಿದ್ದನ್ನು ಅಜಿತ್ ಎತ್ತಿ ಹೇಳಿದರು.
“ಏಕನಾಥ ಶಿಂಧೆ ಬಣ ಹೋಗುವುದಕ್ಕೆ ಮುಂಚೆ ಸಹ ಗಾಳಿ ಸುದ್ದಿ ಬಗ್ಗೆ ಎಚ್ಚರಿಸಿದ್ದೆವು. ಆಗಲೂ ಠಾಕ್ರೆ ನಂಬಿಕೆಯಿದೆ ಎಂದಿದ್ದರು. ಈಗಲೂ ಇರುವ ಕೆಲವರ ಬಗ್ಗೆ ನಂಬಿಕೆಯಿದೆ ಎನ್ನುತ್ತಿದ್ದಾರೆ ಎಂದು ಅಜಿತ್ ಪತ್ರಿಕೆಗೆ ಉತ್ತರಿಸಿದರು.


ಏಕನಾಥ ಶಿಂಧೆ ಹಾಗೆಲ್ಲ ಮಾಡುವುದಿಲ್ಲ ಎಂದು ಉದ್ದವ್ ನನ್ನ ಬಳಿ ಭಾರೀ ನಂಬಿಕೆಯಿಂದ ಹೇಳಿದ್ದರು, ಏಟು ತಿಂದರು. ಈಗ ಏನು ಮಾಡುತ್ತಾರೆ ನೋಡಬೇಕು ಎಂದು ಅಜಿತ್ ಪವಾರ್ ಹೇಳಿದರು.



Join Whatsapp