2006ರ ಮುಂಬೈ ರೈಲು ಬಾಂಬ್ ಸ್ಫೋಟ: ಶಿಕ್ಷಿತರ ಬಗೆಗಿನ ವರದಿ ಕೋರಿದ ಅರ್ಜಿ ವಜಾ ಮಾಡಿದ ದಿಲ್ಲಿ ಹೈಕೋರ್ಟ್

Prasthutha|

ಮುಂಬೈ: ಮಾಹಿತಿ ಹಕ್ಕು ಕಾಯ್ದೆ-ಆರ್ ಟಿಐಯಡಿ ಗುಪ್ತಚರ ಇಲಾಖೆಯ ವರದಿ ಮತ್ತು ದಾಖಲೆಗಳನ್ನು ಬಹಿರಂಗಗೊಳಿಸಲಾಗದು. ಅದು ದೇಶದ ಸಾರ್ವಭೌಮತ್ವ, ಸಮಗ್ರತೆಯನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ದಿಲ್ಲಿ ಹೈಕೋರ್ಟ್ ನ್ಯಾಯಾಲಯವು ಹೇಳಿದೆ.

- Advertisement -


ಮುಂಬೈ ರೈಲು ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಎಹ್ತೆಸಾಮ್ ಕುತುಬುದ್ದೀನ್ ಸಿದ್ದೀಕ್ ಅವರು ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ ಸರಕಾರಗಳ ವರದಿಯನ್ನು ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಿದ ಏಕ ನ್ಯಾಯಾಧೀಶರ ಪೀಠದ ಜಸ್ಟಿಸ್ ಪ್ರತಿಭಾ ಎಂ. ಸಿಂಗ್ ಮೇಲಿನಂತೆ ಹೇಳಿದರು.
ಸಿದ್ದೀಕ್ ಅವರು ಯುಎಪಿಎ- ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಮರಣದಂಡನೆಗೆ ಈಡಾದವರು. ನನ್ನನ್ನು ಕಾನೂನು ಬಾಹಿರವಾಗಿ ನನ್ನ ಮಾನವ ಹಕ್ಕು ಉಲ್ಲಂಘಿಸಿ ಈ ಮೊಕದ್ದಮೆಯಲ್ಲಿ ಸಿಲುಕಿಸಲಾಗಿದೆ ಎಂದು ಸಿದ್ದಿಕಿಯವರು ವಾದಿಸಿದ್ದರು.


ದೇಶದ ಮತ್ತು ದೇಶದ ಜನರ ಹಿತ ದೃಷ್ಟಿಯಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಈ ಮಾಹಿತಿಯನ್ನು ನೀಡಲಾಗದು ಎಂದು ಹೈ ಕೋರ್ಟ್ ಪೀಠವು ಹೇಳಿದೆ.
“ಸಾರ್ವಜನಿಕ ಹಿತಾಸಕ್ತಿ ಮತ್ತು ರಕ್ಷಣೆಯ, ಭದ್ರತೆಯ ದೃಷ್ಟಿಯಿಂದ ಅಂತಹ ವರದಿಗಳನ್ನು ಹೊರಗಿಡಲಾಗದು. ಸನ್ನಿವೇಶ ಸಂದರ್ಭ ವಿಶ್ಲೇಷಿಸಿದಾಗ ಸಿಐಸಿ- ಮುಖ್ಯ ಮಾಹಿತಿ ಆಯುಕ್ತರು ಆದೇಶವು ತಪ್ಪಾಗಿರುವುದು ಸಾಧ್ಯವಿಲ್ಲ. ಆದ್ದರಿಂದ ಈ ಅರ್ಜಿಯನ್ನು ವಜಾ ಮಾಡುತ್ತಿದ್ದೇನೆ” ಎಂದು ಜಸ್ಟಿಸ್ ಪ್ರತಿಭಾ ಎಂ. ಸಿಂಗ್ ಹೇಳಿದರು.

- Advertisement -


2006ರ ಜುಲೈ 11ರಂದು ಪಶ್ಚಿಮ ಸ್ಥಳೀಯ ರೈಲು ಸೇವಾ ಹಳಿಯಲ್ಲಿ ಏಳು ಕಡೆ ಬಾಂಬ್’ಗಳು ಸ್ಫೋಟಗೊಂಡು 189 ಜನರು ಸಾವಿಗೀಡಾದರೆ, 829 ಮಂದಿ ಗಾಯಗೊಂಡಿದ್ದರು.
2007ರ ಈ ಸಂಬಂಧ ವರದಿಗಳನ್ನು ಮಾಹಿತಿ ಹಕ್ಕಿನಡಿ ನೀಡುವಂತೆ ಸಿದ್ದೀಕ್ ಅವರು 2019ರಲ್ಲಿ ಮಾಡಿದ ಮನವಿಯನ್ನು ಸಿಐಸಿ ಯುಎಪಿಎ ಅಡಿ ಪ್ರಕರಣ ಎಂದು ನಿರಾಕರಿಸಿತ್ತು. ಅದನ್ನು ಪ್ರಶ್ನಿಸಿ ಅವರು 2020ರಲ್ಲಿ ಉಚ್ಚ ನ್ಯಾಯಾಲಯದ ಕದ ತಟ್ಟಿದ್ದರು.


ಸಿದ್ದೀಕ್ ಪರ ವಕೀಲರಾದ ಅರ್ಪಿತ್ ಭಾರ್ಗವ ಹಾಜರಾಗಿ, ಸಿದ್ದೀಕ್ ಅವರನ್ನು 2006ರಲ್ಲಿ ಬಂಧಿಸಲಾಗಿದೆ, ಆದರೆ ಅವರ ಬಂಧನದ ಬಗ್ಗೆ ಮಹಾರಾಷ್ಟ್ರ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ 2007ರ ಜನವರಿಯಲ್ಲಿ ದಂಡನನುಮತಿ ಪತ್ರ ನೀಡಿದ್ದಾರೆ. ಅದಕ್ಕೆ ಆರು ತಿಂಗಳು ಮೊದಲೇ ನನ್ನ ಕಕ್ಷಿದಾರರ ಬಂಧನವಾಗಿತ್ತು ಎಂದು ವಾದಿಸಿದರು.
ಆದ್ದರಿಂದ ಅದು ಸ್ವೀಕಾರಾರ್ಹವಲ್ಲ ಇತ್ಯಾದಿ ಅಂಶಗಳನ್ನು ಹೈಕೋರ್ಟ್ ಪೀಠ ಮನ್ನಿಸಲಿಲ್ಲ.

Join Whatsapp