ಮರಾಠಿ ಚಲನಚಿತ್ರ ಪ್ರದರ್ಶನಕ್ಕೆ ತಡೆ: NCP ಮುಖಂಡ ಜಿತೇಂದ್ರ ಅವ್ಹಾದ್, 100 ಮಂದಿಯ ವಿರುದ್ಧ ಪ್ರಕರಣ ದಾಖಲು

Prasthutha|

ಥಾಣೆ: ಸೋಮವಾರ ರಾತ್ರಿ ಥಾಣೆಯ ವಿವಿಯಾನ ಮಾಲ್’ನಲ್ಲಿರುವ ಮಲ್ಟಿಪ್ಲೆಕ್ಸ್’ನಲ್ಲಿ ಮರಾಠಿ ಚಲನಚಿತ್ರ ಹರ್ ಹರ್ ಮಹಾದೇವ್ ಪ್ರದರ್ಶನವನ್ನು ಬಲವಂತವಾಗಿ ತಡೆದ ಬೆನ್ನಲ್ಲೇ ಮಾಜಿ ವಸತಿ ಸಚಿವ ಜಿತೇಂದ್ರ ಅವ್ಹಾದ್ ಮತ್ತು 100 ಮಂದಿ NCP ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

- Advertisement -

ರಾಜಕೀಯ ಪ್ರಚಾರಕ್ಕಾಗಿ ಚಿತ್ರತಂಡ ಛತ್ರಪತಿ ಶಿವಾಜಿ ಅವರ ಇತಿಹಾಸವನ್ನು ತಿರುಚಿದೆ ಎಂದು ಎನ್.ಸಿ.ಪಿ ಶಾಸಕ ಜಿತೇಂದ್ರ ಅವ್ಹಾದ್ ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವಿಜಯ್ ಧುರ್ವೆ ಎಂಬವರ ದೂರಿನ ಆಧಾರದಲ್ಲಿ ವರ್ತಕ್ ನಗರ ಪೊಲೀಸರು ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 141, 143, 146, 149, 323, 504 ಮತ್ತು ಮುಂಬೈ ಪೊಲೀಸ್ ಕಾಯ್ದೆ 37/135 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಎನ್.ಸಿ.ಪಿ ಶಾಸಕರು ಮತ್ತು ಕಾರ್ಯಕರ್ತರು ಸಿನಿಮಾ ಪ್ರೇಕ್ಷಕರೊಂದಿಗೆ ಜಗಳಕ್ಕಿಳಿದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಎನ್.ಸಿ.ಪಿ ಶಾಸಕರು ಮತ್ತು ಕಾರ್ಯಕರ್ತರು ಸಿನಿಮಾ ಪ್ರೇಕ್ಷಕರೊಂದಿಗೆ ಜಗಳವಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.



Join Whatsapp