ಬಿಜೆಪಿ ಸರಕಾರದ ನೋಟ್ ಬ್ಯಾನ್’ಗೆ 6 ವರ್ಷ: “ಬ್ಲಾಕ್ ಡೇ ಇಂಡಿಯನ್ ಇಕಾನಮಿ” ಹ್ಯಾಶ್’ಟ್ಯಾಗ್ ಟ್ವಿಟ್ಟರ್’ನಲ್ಲಿ ಟ್ರೆಂಡ್

Prasthutha|

ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರ ನವೆಂಬರ್ 8, 2016ರಲ್ಲಿ ರೂ. 500 ಮತ್ತು 1000 ಮುಖಬೆಲೆಯ ನೋಟನ್ನು ನಿಷೇಧಿಸಿತ್ತು. ಅದು ಇಂದಿಗೆ 6 ವರ್ಷ ಪೂರೈಸಿದೆ. ಇದರಿಂದಾಗಿ ಭಾರತೀಯ ಆರ್ಥಿಕತೆ ನೆಲಕ್ಕಚ್ಚಿದೆ ಎಂಬುದು ವಾಸ್ತವ. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ ಬಳಕೆದಾರರು “ಬ್ಲಾಕ್ ಡೇ ಇಂಡಿಯನ್ ಇಕಾನಮಿ” ಹ್ಯಾಶ್ ಟ್ಯಾಗ್ ಅಡಿಯಲ್ಲಿ ಮಾಡಿದ ಪೋಸ್ಟ್ ದೇಶದೆಲ್ಲೆಡೆ ಟ್ರೆಂಡಿಂಗ್ ಆಗಿದೆ.

- Advertisement -

ನೋಟ್ ಬ್ಯಾನ್ ಕುರಿತು ಕೇಂದ್ರ ಸರ್ಕಾರದ ವಿರುದ್ಧ ನೆಟ್ಟಿಗರು ಟ್ವಿಟ್ಟರ್ ಪೋಸ್ಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂದು ಪ್ರಧಾನಿ ಮೋದಿಯವರು “ನನಗೆ 50 ದಿನಗಳ ಕಾಲಾವಕಾಶ ಕೊಡಿ, ತಪ್ಪಿದ್ದರೆ ಜೀವಂತ ಸುಟ್ಟುಬಿಡಿ” ಎಂದು ಹೇಳಿದ್ದನ್ನೂ ನೆನಪಿಸಿದ್ದಾರೆ.

ಕೇಂದ್ರ ಸರ್ಕಾರದ ನೆಟ್ಟಿಗರ ಕೆಲವೊಂದು ಆಕ್ರೋಶಭರಿತ ಟ್ವಿಟ್ಟರ್ ಪೋಸ್ಟ್ ಇಲ್ಲಿದೆ

Join Whatsapp