ನವಜೋತ್ ಸಿಂಗ್ ಸಿಧು ಇದೀಗ ಖೈದಿ 241383

Prasthutha|

ಪಟಿಯಾಲಾ: ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧುಗೆ ವರ್ಷ ಹಿಂದಿನ ರೋಡ್ ರೇಜ್ ಪ್ರಕರಣದಲ್ಲಿ  ಸುಪ್ರೀಂ ಕೋರ್ಟ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ 24 ಗಂಟೆಗಳ ನಂತರ ಕಾಂಗ್ರೆಸ್ ನಾಯಕ ಶುಕ್ರವಾರ ಪಟಿಯಾಲದ ನ್ಯಾಯಾಲಯಕ್ಕೆ ಶರಣಾದರು. ಇದೀಗ ಅವರನ್ನು ಪಂಜಾಬ್‌ ನ ಪಟಿಯಾಲ ಜೈಲಿನಲ್ಲಿ ಬ್ಯಾರಕ್ ಸಂಖ್ಯೆ 7 ರಲ್ಲಿ ಇರಿಸಲಾಗಿದೆ. ಅವರ ಖೈದಿ ಸಂಖ್ಯೆ 241383.

- Advertisement -

ಇದೇ ಜೈಲಿನಲ್ಲಿ ಸಿಧು ಅವರ ಪ್ರತಿಸ್ಪರ್ಧಿ ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಕೂಡ ಖೈದಿಯಾಗಿ ಜೈಲಿನಲ್ಲಿದ್ದಾರೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಬಿಕ್ರಮ್ ಮಜಿಥಿಯಾ ಅವರು ಫೆಬ್ರವರಿ-ಮಾರ್ಚ್‌ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಮೃತಸರ ಪೂರ್ವದಿಂದ ಸಿಧು ವಿರುದ್ಧ ಸ್ಪರ್ಧಿಸಿದ್ದರು. ಇಬ್ಬರೂ ನಾಯಕರು ಚುನಾವಣೆಯಲ್ಲಿ ಎಎಪಿಯ ಜೀವನಜೋತ್ ಕೌರ್ ವಿರುದ್ಧ ಸೋತಿದ್ದರು.

Join Whatsapp