ಮುಸ್ಲಿಮನೆಂದು ಭಾವಿಸಿ ಜೈನ ವೃದ್ಧನನ್ನು ಥಳಿಸಿ ಕೊಂದ ಬಿಜೆಪಿ ಮುಖಂಡ

Prasthutha|

ನೀಮುಚ್:‌ ಮಧ್ಯಪ್ರದೇಶದ ನೀಮುಚ್‌ ಜಿಲ್ಲೆಯಲ್ಲಿ ಮುಸ್ಲಿಂ ಎಂದು ಭಾವಿಸಿ  ಜೈನ ಧರ್ಮಕ್ಕೆ ಸೇರಿದ ಮಾನಸಿಕ ಅಸ್ವಸ್ಥ ವೃದ್ಧರೋರ್ವರನ್ನು  ಥಳಿಸಿ ಕೊಲೆಗೈದ ಘಟನೆ ವರದಿಯಾಗಿದ್ದು, ಆರೋಪಿ ಬಿಜೆಪಿ ಮುಖಂಡನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಶೋಧ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ಮಾನಸ ರಾಂಪುರ ರಸ್ತೆಯಲ್ಲಿರುವ ಮಾರುತಿ ಶೋರೂಂ ಬಳಿ ಗುರುವಾರ 65 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಅವರ ಚಿತ್ರಗಳನ್ನು ಸಾಮಾಜಿಕ ತಾಣದಲ್ಲಿ ಬಿಡುಗಡೆ ಮಾಡಿದಾಗ ರತ್ಲಾಂ ಜಿಲ್ಲೆಯ ಭನ್ವರ್‌ ಲಾಲ್‌ ಜೈನ್‌ ಎಂದು ಗುರುತಿಸಲಾಗಿದೆ. ಅಗತ್ಯ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಮೃತದೇಹವನ್ನು ಕುಟುಂಬಿಕರಿಗೆ ಹಸ್ತಾಂತರಿಸಲಾಗಿದ್ದು, ಅವರಿಗೆ ವೃದ್ಧಾಪ್ಯ ಸಂಬಂಧಿ ಮರೆವು ರೋಗವಿದ್ದು, ವಿಕಲಚೇತನರಾಗಿದ್ದರು ಎಂದು ಕುಟುಂಬದ್ಥರು ತಿಳಿಸಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿರುವ ವೀಡಿಯೋದಲ್ಲಿ, ವ್ಯಕ್ತಿಯೊಬ್ಬ ಭನ್ವರ್‌ ಲಾಲ್‌ ರ ಕೆನ್ನೆಗೆ ನಿರಂತರವಾಗಿ ಹೊಡೆಯುತ್ತಿರುವುದು ಕಂಡು ಬಂದಿದ್ದು  ಥಳಿಸುವ ವೇಳೆ, ನಿಮ್ಮ ಹೆಸರು ಮುಹಮ್ಮದ್‌? ನೀವು ಜವ್ರಾದಿಂದ ಬಂದಿದ್ದೀಯಾ? ನಿಮ್ಮ ಆಧಾರ್‌ ಕಾರ್ಡ್‌ ತೋರಿಸು ಎಂದು ಹೇಳುತ್ತಿದ್ದಾನೆ. ಈ ಥಳಿತದಿಂದಲೇ ವೃದ್ಧ ಸಾವನ್ನಪ್ಪಿದ್ದು ಎಂದು ದೃಡಪಡಿಸಿದ ಅರಕ್ಷಕರು ಆರೋಪಿಗಾಗಿ ಬಲೆ ಬೀಸಿದ್ದಾರೆ.

- Advertisement -

ಪೊಲೀಸ್‌ ತನಿಖೆಯಲ್ಲಿ ಆರೋಪಿಯನ್ನು ಬಿಜೆಪಿ ಮುಖಂಡ ದಿನೇಶ್‌ ಕುಶ್ವಾಹಾ ಎಂದು ಗುರುತಿಸಲಾಗಿದ್ದು, ಅವರ ಪತ್ನಿ ನಗರಸಭಾ ಸದಸ್ಯೆಯಾಗಿದ್ದಾರೆ . ಧರ್ಮ ಯಾವುದೇ ಆಗಲಿ ಒಬ್ಬ ಮಾನಸಿಕ ರೋಗಿಯಾಗಿರುವ ವ್ಯಕ್ತಿಯನ್ನು ಥಳಿಸಿ ಕೊಲೆಗೈದ ವ್ಯಕ್ತಿಯ ವಿಕೃತ ಮನಸ್ಥಿತಿಗೆ ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ

Join Whatsapp