ಮುಂಬೈ: ದೇಶದಾದ್ಯಂತ ವಿವಾದವನ್ನು ಸೃಷ್ಟಿಸಿದ್ದ ಕಪೋಲಕಲ್ಪಿತವಾಗಿ ನಿರ್ಮಿಸಲಾಗಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ ಬಗ್ಗೆ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರು ಪ್ರತಿಕ್ರಿಯಿಸಿದ್ದು, ಜಗತ್ತನ್ನು ಒಂದುಗೂಡಿಸಬೇಕೇ ಹೊರತು ಒಡೆಯಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಅಥವಾ ಕಾದಂಬರಿ ಯಾರನ್ನಾದರೂ ನೋಯಿಸುವುದಾದರೆ ಅದು ತಪ್ಪು. ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ತರಲು ನಾವು ಸಿನಿಮಾ ಮಾಡಬಾರದು ಎಂದು ಅವರು ಹೇಳಿದ್ದಾರೆ.
‘ಸಿನಿಮಾ ಯಾವಾಗಲೂ ಜನರಲ್ಲಿ ಸಾಮಾಜಿಕ ಸೌಹಾರ್ದತೆ ಮತ್ತು ಪ್ರೀತಿಯನ್ನು ಬೆಳೆಸಬೇಕು. ಅಂತಹಾ ಸಿನಿಮಾಗಳನ್ನು ಪ್ರಚಾರ ಮಾಡುವುದು ನಮ್ಮ ಜವಾಬ್ದಾರಿ. ಒಂದು ಚಿತ್ರಕ್ಕೆ ಸಾಮಾಜಿಕ ಸಾಮರಸ್ಯವನ್ನು ಒಡೆಯುವ ಶಕ್ತಿ ಇದ್ದರೆ ಅದು ತಪ್ಪು. ನಾವು ಜಗತ್ತನ್ನು ಒಂದುಗೂಡಿಸಬೇಕೇ ಹೊರತು ವಿಭಜಿಸಬಾರದು’ ಎಂದು ನವಾಜುದ್ದೀನ್ ಸಿದ್ದಿಕಿ ಅಭಿಪ್ರಾಯಪಟ್ಟಿದ್ದಾರೆ.