ನ್ಯೂಯಾರ್ಕ್ : ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ನ್ಯೂಯಾರ್ಕ್ ನ ಉಪಾಧ್ಯಕ್ಷೆ ಮತ್ತು ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿ ಭಾರತೀಯ ಮೂಲದ ಹಣಕಾಸು ಸೇವಾ ಉದ್ಯಮದ ತಜ್ಞೆ ನೌರೀನ್ ಹಸನ್ ಆಯ್ಕೆಯಾಗಿದ್ದಾರೆ. ನೌರೀನ್ ಹಸನ್ ಈ ಹುದ್ದೆಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.
ಪ್ರಥಮ ಉಪಾಧ್ಯಕ್ಷೆಯಾಗಿರುವ ಹಸನ್ ಈ ಬ್ಯಾಂಕ್ ನ ಅತ್ಯುನ್ನತ ಹುದ್ದೆಯಲ್ಲಿ ಎರಡನೇ ಶ್ರೇಣಿಯಲ್ಲಿರುತ್ತಾರೆ. ಜತೆಗೆ ಫೆಡರಲ್ ಮುಕ್ತ ಮಾರುಕಟ್ಟೆ ಸಮಿತಿಯ ಪರ್ಯಾಯ ಮತದಾನ ಹಕ್ಕು ಹೊಂದಿರುವ ಸದಸ್ಯೆಯೂ ಆಗಿರುತ್ತಾರೆ.