March 6, 2021

ಬಂಟ್ವಾಳ । ಪತಿ – ಪತ್ನಿ ಜಗಳ : ಪತ್ನಿಯ ಕತ್ತಿಯೇಟಿಗೆ ಪತಿ ದಾರುಣ ಅಂತ್ಯ !

ಬಂಟ್ವಾಳ: ಮಂಗಳೂರಿನ ಬಂಟ್ವಾಳದಲ್ಲಿ ಪತಿ-ಪತ್ನಿ ಮಧ್ಯೆ ನಡೆದ ಜಗಳದಲ್ಲಿ ಪತಿಯು ದಾರುಣವಾಗಿ ಕೊಲೆಯಾಗಿದ್ದಾರೆ. ಪತ್ನಿಯ ಕತ್ತಿಯೇಟಿಗೆ ಪತಿ ಕೊಲೆಯಾಗಿದ್ದಾರೆನ್ನಲಾಗಿದೆ. ಬಂಟ್ವಾಳದ ನಾವೂರಿನಲ್ಲಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ನಾವೂರ ಸೂರ ಕ್ವಾರ್ಟರ್ಸ್ ನಿವಾಸಿ ಸೇಸಪ್ಪ ಪೂಜಾರಿ(60) ಕೊಲೆಯಾದವರಾಗಿದ್ದಾರೆ. ಕೊಲೆ ಆರೋಪದಡಿ ಸೇಸಪ್ಪ ಅವರ ಪತ್ನಿ ಉಮಾವತಿ (52)ಯನ್ನು ನಾವೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.  ಕೂಲಿ ಕಾರ್ಮಿಕರಾಗಿದ್ದ ಸೇಸಪ್ಪ ಅವರು ಕುಡಿತದ ಚಟ ಹೊಂದಿದ್ದಾರೆನ್ನಲಾಗಿದೆ. ಮದ್ಯಪಾನಿಯಾಗಿದ್ದ ಇವರಿಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಮಾರ್ಚ್ ಮೂರರ ರಾತ್ರಿ ಕೂಡಾ ಇವರಿಬ್ಬರ ಮಧ್ಯೆ ಜಗಳ ನಡೆದಿದ್ದು, ಅದು ತಾರಕಕ್ಕೇರಿ ಉಮಾವತಿಯವರು ಸೇಸಪ್ಪನವರ ತಲೆಗೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಹಣೆಯಲ್ಲಿ ತೀವ್ರವಾದ ಗಾಯವಾಗಿ ರಕ್ತ ಸೋರುತ್ತಿದ್ದರೂ, ಸೇಸಪ್ಪನವರು ವೈದ್ಯರಿಗೆ ತೋರಿಸದೆ ಮನೆಯಲ್ಲೇ ಉಳಿದುಕೊಂಡಿದ್ದರು. ಮಾರ್ಚ್ 5 ರ ಸಂಜೆ ಸೇಸಪ್ಪನವರು ಮೃತಪಟ್ಟಿದ್ದಾರೆನ್ನಲಾಗಿದೆ.  ಘಟನೆಯ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ರಾಮಾಂತರ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್ ಅವರ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಸಬ್ ಇನ್ಸ್ಪೆಕ್ಟರ್ ಎಸ್ ಐ ಪ್ರಸನ್ನ ಅವರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!