ರಾಷ್ಟ್ರಪತಿ ಚುನಾವಣೆ: ಬಿಜೆಪಿ ಮತ್ತು ವಿಪಕ್ಷಗಳಲ್ಲಿ ಕೇಳಿ ಬರುತ್ತಿರುವ ಅಭ್ಯರ್ಥಿ ನಾಮಗಳು ಇಲ್ಲಿವೆ.

Prasthutha|

ನವದೆಹಲಿ: ಜುಲೈ ತಿಂಗಳಲ್ಲಿ ರಾಷ್ಟ್ರಪತಿ ಚುನಾವಣೆಯು ನಡೆಯಲಿಕ್ಕಿದ್ದು ರಾಷ್ಟ್ರೀಯ ಪಕ್ಷಗಳು ಸರ್ವ ತಯಾರಿಯಲ್ಲಿದೆ. ಕಾಂಗ್ರೆಸ್, ಎನ್ ಸಿ ಪಿ, ತೃಣಮೂಲ ಕಾಂಗ್ರೆಸ್, ಸಿಪಿಎಂ, ಜೆಡಿಎಸ್ ಮತ್ತಿತರ ಪಕ್ಷಗಳು ಒಳಗೊಂಡ ವಿಪಕ್ಷಗಳು ಅಭ್ಯರ್ಥಿ ಆಯ್ಕೆಗೆ ಒಮ್ಮತದ ನಿರ್ಣಯ ಕಂಡುಕೊಳ್ಳುತ್ತಿದೆ.

- Advertisement -

ಎನ್ ಸಿ ಪಿ ಮುಖಂಡ ಶರದ್ ಪವಾರ್ , ಮಹಾತ್ಮ ಗಾಂಧೀಜಿಯ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಮತ್ತು ಜಮ್ಮು – ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಈ ಮೂರು ಹೆಸರುಗಳು ವಿಪಕ್ಷ ವಲಯಗಳಲ್ಲಿ ಕೇಳಿ ಬರುತ್ತಿದೆ. ಇದರಲ್ಲಿ ಶರದ್ ಪವಾರ್ ಅಭ್ಯರ್ಥಿ ಸ್ಥಾನಕ್ಕೆ ನಕಾರ ತೋರಿದ್ದಾರೆ. ಗೋಪಾಲಕೃಷ್ಣ ಗಾಂಧಿಯವರ ಹೆಸರು ಬಹುತೇಕವಾಗಿ ನಿರ್ಣಯವಾಗುವಂತಿದೆ ಎಂಬ ಸುದ್ದಿಯೂ ಇದೆ.

ಇತ್ತ ಕಡೆ ಬಿಜೆಪಿ ಕಡೆಯಿಂದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌, ತೆಲಂಗಾಣ ರಾಜ್ಯಪಾಲೆ ತಮಿಳಿಸಾಯಿ ಸೌಂದರರರಾಜನ್‌, ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌, ಮೊದಲಾದವರ ಹೆಸರು ಕೇಳಿಬರುತ್ತಿವೆ.



Join Whatsapp