ರಾಷ್ಟ್ರೀಯ ಕ್ರೀಡಾಕೂಟ|ರಾಜ್ಯದ ಮಹಿಳಾ ಸ್ಕೇಟಿಂಗ್ ತಂಡಕ್ಕೆ ಬೆಳ್ಳಿ ಪದಕ

Prasthutha|

ಗುಜರಾತ್‌ನಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದ ಸ್ಪೀಡ್ ರೋಲರ್ ಸ್ಕೇಟಿಂಗ್ 3000 ಮೀಟರ್ ರಿಲೇ ಟೂರ್ನಿಯಲ್ಲಿ ಕರ್ನಾಟಕದ ಮಹಿಳಾ ತಂಡ ಬೆಳ್ಳಿ ಪದಕ ಹಾಗೂ ಪುರುಷರ ತಂಡ ಕಂಚಿನ ಪದಕ ಗೆದ್ದಿದೆ.

- Advertisement -

ಮೈಸೂರಿನ ವಿದ್ಯಾವರ್ಧಕ ತಾಂತ್ರಿಕ ವಿದ್ಯಾಲಯದ ಇಂಜಿನಿಯರಿಂಗ್ ವಿದ್ಯಾರ್ಥಿ ರಿಯಾ ಎಲಿಝಬೆತ್, ಮಹಿಳಾ ತಂಡದ ಸೀನಿಯರ್ ಸ್ಕೇಟಿಂಗ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದಕ್ಕೂ ಮೊದಲು ದಕ್ಷಿಣ ಕೊರಿಯದಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್‌ ಎಂಬ ಕೀರ್ತಿ ರಿಯಾ ಅವರದ್ದಾಗಿದೆ. ಈಗಾಗಲೇ ಜೂನಿಯರ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ರಿಯಾ ಮುಂದಿನ ಏಷ್ಯನ್‌ ಚಾಂಪಿಯನ್‌ಶಿಪ್ ಹಾಗೂ ಬರ್ಲಿನ್ ಮ್ಯಾರಥಾನ್ ಮೇಲೆ ಕಣ್ಣಿಟ್ಟಿದ್ದಾರೆ.

“20 ವರ್ಷದ ನಂತರ ಸ್ಕೇಟಿಂಗ್ ಆಟದಲ್ಲಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದೆ, ಮೊದಲ ಋತುವಲ್ಲೇ ಎರಡು ತಂಡವು ಪದಕ ಗೆದ್ದಿರುವುದು ಸಂತಸದ ವಿಚಾರ ಹಾಗೂ ಮುಂದಿನ ಒಲಂಪಿಕ್ಸ್ ಕ್ರೀಡಾಕೂಟದಲ್ಲೂ ಸ್ಕೇಟಿಂಗ್ ವಿಭಾಗಕ್ಕೆ ಮಾನ್ಯತೆ ದೊರಕಿದೆ. ಹೀಗಾಗಿ ಭಾರತಕ್ಕೆ ಮತ್ತಷ್ಟು ಪದಕ ಗೆಲ್ಲಲು ಒಳ್ಳೆಯ ಅವಕಾಶಗಳಿವೆ” ಎಂದು ಕರ್ನಾಟಕ ತಂಡದ ತರಬೇತುದಾರ, ಏಕಲವ್ಯ ಪ್ರಶಸ್ತಿ ವಿಜೇತ ಪ್ರತೀಕ್ ರಾಜ ತಿಳಿಸಿದರು.

Join Whatsapp