ಕೊರೋನಾ ವೈರಸ್ ಮಾರಣ ಹೋಮಕ್ಕೆ ನರೇಂದ್ರ ಮೋದಿ ನೇರ ಕಾರಣ,ಪ್ರಧಾನಿಯ ಇಮೇಜ್ ಹಾಳಾಗಿದೆ : ರಾಹುಲ್ ಗಾಂಧಿ

Prasthutha|

ದೇಶದಲ್ಲಿ ಲಕ್ಷಾಂತರ ಜನ ಕೋವಿಡ್ ಸೋಂಕಿನಿಂದ ಸಾವನ್ನಪ್ಪಲು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಕಾರಣಕರ್ತರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಪ್ರಧಾನಿ ಮೋದಿಯ ಸಂಪೂರ್ಣ ಇಮೇಜ್‌ ಹಾಳಾಗಿದೆ, ಅವರು ಶಾಕ್‌ನಲ್ಲಿ ಇದ್ದಾರೆ ಎಂದು ರಾಹುಲ್ ಹೇಳಿದ್ದಾರೆ.

- Advertisement -

ವಿಡಿಯೋ ಕಾನ್ಫರೆನ್ಸ್‌ ಮೂಲಕ ಇಂದು ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಕೊರೊನಾ 3ನೇ ಅಲೆಯು 2ನೇ ಅಲೆಗಿಂತ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ. ನಾವು ಲಸಿಕಾ ಅಭಿಯಾನಕ್ಕೆ ವೇಗ ನೀಡದಿದ್ದರೆ 4,5ನೇ ಅಲೆಗಳು ಬರುತ್ತವೆ ಎಂದೂ ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಕೊರೋನ ಸಂಬಂಧ ನಾನು ನಿಮ್ಮನ್ನು ಭಯಪಡಿಸುತ್ತಿಲ್ಲ. ಇದರ ಬಗ್ಗೆ ನಾನು ಕೇವಲ ನಿಮ್ಮನ್ನು ಎಚ್ಚರಿಸುತ್ತಿವೆ ಎಂದಿದ್ದಾರೆ. ಇದೇ ವೇಳೆ ಕೋವಿಡ್‌ ಅನ್ನು ‘ಮೋವಿಡ್‌’ ಎಂದು ಲೇವಡಿ ಮಾಡಿದ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡ ರಾಹುಲ್ ಗಾಂಧಿ, ಕಾಂಗ್ರೆಸ್‌ ವಿರುದ್ಧದ ಟೂಲ್‌ ಕಿಟ್ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದರು.

ಕೊರೊನಾ ವಿಚಾರವಾಗಿ 3 ತಿಂಗಳ ಹಿಂದೆಯೇ ಈ ಕುರಿತು ನಾನು ಎಚ್ಚರಿಸಿದ್ದೆ ಎಂದ ರಾಹುಲ್ ಗಾಂಧಿ, ಸಾವಿನ ಸಂಖ್ಯೆ ಕುರಿತು ಸುಳ್ಳು ಹೇಳಬೇಡಿ, ದೇಶದ ಜನರಿಗೆ ನೀವು ಸುಳ್ಳು ಹೇಳುತ್ತಿದ್ದೀರಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಅಧಿಕಾರಿಗಳು, ವಿರೋಧ ಪಕ್ಷದ ನಾಯಕರ ಮಾತುಗಳನ್ನು ಕೇಳಿ, ನಿಮಗೆ ಮಾಹಿತಿ ಕೊರತೆ ಇದೆ ಹಾಗೂ ಸಮಯ ಕೂಡಾ ಕಡಿಮೆ ಇದೆ ಎಂದು ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಮೋದಿ ವಿರುದ್ದ ತಮ್ಮ ಆಕ್ರೋಶ ವ್ಯಕ್ತ ಪಡಿಸಿದಾರೆ.
ಇದೇ ಸಂದರ್ಭದಲ್ಲಿ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ವೇಗಗೊಳಿಸುವಂತೆ ಸಲಹೆ ನೀಡಿದ್ದಾರೆ, ಕೊರೋನ ಮೊದಲ ಅಲೆಗಿಂತಾ ಎರಡನೇ ಅಲೆಯಲ್ಲಿ ವೈರಸ್ ಶಕ್ತಿಯುತವಾಗಿತ್ತು, ನಂತರದ ಅಲೆಗಳಲ್ಲಿ ಮತ್ತಷ್ಟು ಶಕ್ತಿಯುತವಾಗಿ ಬರುತ್ತವೆ ಎಂದು ಹೇಳಿದ್ದಾರೆ. ಕೊರೊನಾ ಲಸಿಕಾ ಅಭಿಯಾನದ ಕಾರ್ಯತಂತ್ರವನ್ನು ಕಳೆದ ವರ್ಷವೇ ಆರಂಭಿಸಿಬೇಕಿತ್ತು. ನಾನು ಎಚ್ಚರಿಕೆಯನ್ನೂ ನೀಡಿದ್ದೆಆದರೆ ನೀವೆಲ್ಲರೂ ಈ ಮಾತನ್ನು ನಿರ್ಲಕ್ಷ್ಯ ಮಾಡಿದ್ದೀರಿ ಎಂದು ರಾಹುಲ್ ಗಾಂಧಿ ಬೇಸರ ವ್ಯಕ್ತಪಡಿಸಿದರು.



Join Whatsapp