ಭೋಪಾಲ್: ಮಾಲ್ ನಲ್ಲಿ ಸಿಬ್ಬಂದಿವರ್ಗ ನಮಾಝ್ ಮಾಡಿದ್ದಾರೆ ಎಂಬ ಕಾರಣಕ್ಕೆ ಸಂಘಪರಿವಾರದ ಕಾರ್ಯಕರ್ತರು ಭಜನೆ ಮಾಡಿ ಪ್ರತಿಭಟನೆ ಮಾಡಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನ ಮಾಲ್ ನಲ್ಲಿ ನಡೆದಿದೆ.
ಸಂಘಪರಿವಾರದ ಕಾರ್ಯಕರ್ತರು ಮಧ್ಯಾಹ್ನ 3:30 ರ ಸುಮಾರಿಗೆ ಮಾಲ್ ಬಳಿ ಸೇರಿ ಮಾಲ್ ನಲ್ಲಿ ನಮಾಝ್ ಸಲ್ಲಿಸುವುದನ್ನು ವಿರೋಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಳಿಕ ನಮಾಝ್ ಮಾಡುವುದನ್ನು ವಿರೋಧಿಸಿ ಮಾಲ್ ಒಳಗೆ ಸಂಘಪರಿವಾರದ ಕಾರ್ಯಕರ್ತರು ಭಜನೆ ಹಾಡಲು ಪ್ರಾರಂಭಿಸಿದರು. ವಿವಾದವಾಗುವುದನ್ನು ಕಂಡ ಮಾಲ್ ಆಡಳಿತ ಮಂಡಳಿ ಪೊಲೀಸರಿಗೆ ಕರೆ ಮಾಡಿ ಎರಡೂ ಕಡೆಯವರನ್ನು ಸಮಾಧಾನ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.