ಯುಪಿ ಆಸ್ಪತ್ರೆಯಲ್ಲಿ ನಮಾಜ್: ‘ಯಾವುದೇ ಅಪರಾಧವಿಲ್ಲ’ ಎಂದ ಪೊಲೀಸರ ತನಿಖೆ

Prasthutha|

ಉತ್ತರ ಪ್ರದೇಶ: ಪ್ರಯಾಗ್ ರಾಜ್ ಆಸ್ಪತ್ರೆಯಲ್ಲಿ ನಮಾಜ್ ಮಾಡುತ್ತಿದ್ದ ಮುಸ್ಲಿಂ ಮಹಿಳೆಯನ್ನು ಕೆಲವು ಅಪರಿಚಿತ ವ್ಯಕ್ತಿಗಳು ವೀಡಿಯೋ ಶೂಟ್ ಮಾಡಿದ್ದು ತನಿಖೆಗೆ ಆಗ್ರಹಿಸಿದ್ದರು. ಈ ಇಸ್ಲಾಮೋಫೋಬಿಕ್ ಅಭಿಯಾನದ ವಿರುದ್ಧ ಪ್ರತಿಕ್ರಿಯಿಸಿದ ಪೊಲೀಸರು ಈ ವಿಷಯದಲ್ಲಿ ಯಾವುದೇ ಅಪರಾಧ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

- Advertisement -

ಪ್ರಯಾಗ್ ರಾಜ್ ಪೊಲೀಸರು ತನಿಖೆಯ ಆರಂಭದಲ್ಲಿ, ವೀಡಿಯೊದ ಬಗ್ಗೆ ಗಮನ ಹರಿಸಲಾಗಿದೆ ಮತ್ತು ನಿಯಮಗಳ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ನಿರ್ದೇಶಿಸಲಾಗಿದೆ ಎಂದು ಹೇಳಿದ್ದರು. ಬಳಿಕ ಟ್ವೀಟ್ ಮಾಡಿದ ಪೊಲೀಸರು, ವೀಡಿಯೊದಲ್ಲಿರುವ ಮಹಿಳೆ ಯಾವುದೇ ತಪ್ಪು ಉದ್ದೇಶಗಳಿಲ್ಲದೆ ಮತ್ತು ಯಾವುದೇ ಕೆಲಸ ಅಥವಾ ಸಂಚಾರಕ್ಕೆ ಅಡ್ಡಿಪಡಿಸದೆ, ರೋಗಿಯ ತ್ವರಿತ ಚೇತರಿಕೆಗಾಗಿ ನಮಾಜ್ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಕೃತ್ಯವು ಅಪರಾಧದ ಯಾವುದೇ ವರ್ಗಕ್ಕೆ ಸೇರುವುದಿಲ್ಲ ಎಂದು ಹೇಳಿದ್ದಾರೆ.

- Advertisement -

ಆದಾಗ್ಯೂ, ಇಂತಹ ಚಟುವಟಿಕೆಯ ವಿರುದ್ಧ ಮುಸ್ಲಿಂ ಮಹಿಳೆಗೆ ಎಚ್ಚರಿಕೆ ನೀಡಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದು, ತೇಜ್ ಬಹದ್ದೂರ್ ಸಪ್ರು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ಕೆ.ಅಖೌರಿ, ವಾರ್ಡ್ನಲ್ಲಿ ಇಂತಹ ಚಟುವಟಿಕೆಗಳ ವಿರುದ್ಧ ನಾವು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದೇವೆ. ಅದೊಂದು ಸಾರ್ವಜನಿಕ ಸ್ಥಳ ಎಂದು ಹೇಳಿದರು.

Join Whatsapp