ಲುಲು ಮಾಲ್ ನಲ್ಲಿ ನಮಾಜ್; ಸುಂದರ ಕಾಂಡ ಪಠಿಸುವುದಾಗಿ ಹಿಂದೂ ಮಹಾಸಭಾ ಬೆದರಿಕೆ

Prasthutha|

ಲಕ್ನೋ: ಲಕ್ನೋದ ಲುಲು ಮಾಲ್ ನಲ್ಲಿ ನಮಾಜ್ ಮಾಡುತ್ತಿರುವ ವೀಡಿಯೊ ವೈರಲ್ ಆದ ಬೆನ್ನಲ್ಲೇ ಅಖಿಲ ಭಾರತ ಹಿಂದೂ ಮಹಾಸಭಾ ಬೆದರಿಕೆ ಹಾಕಿದೆ.

- Advertisement -

ಮಾಲ್ ನಲ್ಲಿ ಪ್ರಾರ್ಥನೆ ಸಲ್ಲಿಸಿದರೆ, ಸುಂದರ ಕಾಂಡವನ್ನು ಪಠಿಸುವಂತೆ ಒತ್ತಾಯಿಸಲಾಗುವುದು. ಲುಲು ಮಾಲ್ ಲವ್ ಜಿಹಾದ್ ನ ಹೊಸ ಕೇಂದ್ರ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ವಕ್ತಾರ ಶಿಶಿರ್ ಚತುರ್ವೇದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇದು ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡುವಂತಿಲ್ಲ ಎಂಬ ಆದೇಶದ ಉಲ್ಲಂಘನೆಯಾಗಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರ ಶಿಶಿರ್ ಚತುರ್ವೇದಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

- Advertisement -

ಲಕ್ನೋದ ಲುಲು ಮಾಲ್ ಸೋಮವಾರದಿಂದ ಸಾರ್ವಜನಿಕರಿಗೆ ತೆರೆದಿದ್ದು, ಭಾನುವಾರ, ಸಿಎಂ ಯೋಗಿ ಆದಿತ್ಯನಾಥ್ ಅವರು ಲುಲು ಮಾಲ್ ಅನ್ನು ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಯೋಗಿ ಸರ್ಕಾರದ ಹಲವಾರು ಸಚಿವರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Join Whatsapp