RSS ಎಂತಹ ಸಂಸ್ಕೃತಿ ಕಲಿಸುತ್ತದೆ ಎಂಬುದಕ್ಕೆ ಅಯೋಗ್ಯನಂತೆ ಮಾತನಾಡುವ ನಳಿನ್ ಕುಮಾರ್ ಕಟೀಲ್ ಉದಾಹರಣೆ: ಡಾ.ಎಚ್.ಸಿ.ಮಹದೇವಪ್ಪ

Prasthutha|

ಬೆಂಗಳೂರು : ಆರ್ ಎಸ್ ಎಸ್ ನಲ್ಲಿ ಎಂತಹ ಸಂಸ್ಕೃತಿ ಕಲಿಸುತ್ತಾರೆ ಎಂಬುದಕ್ಕೆ ಅಯೋಗ್ಯನಂತೆ ಮಾತನಾಡುವ ನಳಿನ್ ಕುಮಾರ್ ಕಟೀಲ್ ಉದಾಹರಣೆ. ಆರ್ ಎಸ್ ಎಸ್ ನಿಂದ ರಾಜಕಾರಣಕ್ಕೆ ಬರುವವರು ಎಂತಹ ವಂಚಕರು, ಲಂಪಟರು ಎನ್ನುವುದಕ್ಕೆ ನರೇಂದ್ರ ಮೋದಿ ಉದಾಹರಣೆ. RSS ಪ್ರಕಾರ ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಎಂದರೆ “ಸುಳ್ಳು ಹೇಳಿ, ಮಾತೃಭೂಮಿಗೆ ವಂಚನೆ ಮಾಡುವುದು ಎಂದರ್ಥ! ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನೋಟ್ ಬ್ಯಾನ್ ನಿಂದ ಹಿಡಿದು ಈಗಿನ ತೈಲ ಬೆಲೆ ಏರಿಕೆಯವರೆಗೆ ಮೋದಿಯವರ ಆಡಳಿತಾತ್ಮಕ ನಿರ್ಧಾರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು, ಆತನ ಮಾತೃಸಂಸ್ಥೆಯಾದ ಆರ್ ಎಸ್ ಎಸ್ ಎಂತಹ ದಡ್ಡ ಶಿಖಾಮಣಿಗಳ ಸಂಸ್ಥೆ ಎಂಬ ಸಂಗತಿಯು ನಮಗೆ ಸುಲಭವಾಗಿ ತಿಳಿಯುತ್ತದೆ. ನನ್ನ ಪ್ರಕಾರ RSS ಎಂದರೆ “ರಾಷ್ಟ್ರೀಯ ಕಾರ್ಪೊರೇಟ್ ಗುಲಾಮಗಿರಿ ಸಂಘ”ಎಂದರ್ಥ ಎಂದು ಮಹದೇವಪ್ಪ ಕಿಡಿಕಾರಿದ್ದಾರೆ.

Join Whatsapp