ಅಂಕಾರ: ಟರ್ಕಿ ದೇಶದ 24 ವರ್ಷದ ಈ ಯುವತಿ ವಿಶ್ವದ ಅತಿ ಎತ್ತರದ ಮಹಿಳೆ ಎಂಬ ದಾಖಲೆ ನಿರ್ಮಿಸಿದ್ದಾಳೆ. 215.16 ಸೆಂ.ಮೀ. ಅಂದರೆ 7 ಅಡಿ 0.7 ಇಂಚು ಎತ್ತರವಿರುವುದಾಗಿ ಗಿನ್ನಿಸ್ ದಾಖಲೆಯಾಗಿದೆ.
ರುಮಿಯ್ಸ ಗೆಲ್ಗಿ ತನ್ನ 18ನೇ ವಯಸ್ಸಿನಲ್ಲಿ 2014ರಲ್ಲಿ ಅತಿ ಎತ್ತರದ ಮಹಿಳಾ ಟೀನೇಜರ್ ಆಗಿದ್ದಳು. ಇದೀಗ ಮತ್ತೊಮ್ಮೆ ತಮ್ಮ ಎತ್ತರವನ್ನು ಅಳತೆ ಮಾಡಿಸಿ ವಿಶ್ವದ ಎತ್ತರದ ಮಹಿಳೆಯಾಗಿ ಗಿನ್ನಿಸ್ ದಾಖಲೆ ಬರೆದಿದ್ದಾಳೆ.
ಅತಿ ಎತ್ತರವಿರುವುದರಿಂದ ಹೆಚ್ಚು ದೂರ ನಡೆಯಲು ಆಕೆ ವ್ಹೀಲ್ ಚೇರ್ ಅನ್ನೇ ಬಳಸುತ್ತಾಳೆ. ಈಕೆ ರಸ್ತೆಗೆ ಬಂದರೆ ಫೋಟೋ ತೆಗೆಸಿಕೊಳ್ಳಲು ಸಾರ್ವಜನಿಕರು ಮುಗಿಬೀಳುತ್ತಾರೆ.
ವಿಶೇಷ ಎಂದರೆ ವಿಶ್ವದ ಅತಿ ಎತ್ತರದ ಪುರುಷ ಕೂಡ ಟರ್ಕಿ ದೇಶದವನೆ. ಸುಲ್ತಾನ್ ಕೊಸೆನ್ ಎಂಬಾತ 251 ಸೆಂ.ಮೀ. (8 ಅಡಿ 2.8 ಇಂಚು) ಎತ್ತರವಿದ್ದಾನೆ. ವಿಶ್ವದ ಎತ್ತರದ ಮಹಿಳೆ ಮತ್ತು ಪುರುಷ ಒಂದೇ ದೇಶದಲ್ಲಿ ಇರುವುದು ತೀರ ಅಪರೂಪ ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನವರು ಹೇಳಿದ್ದಾರೆ.