AFSPA ಕಾಯ್ದೆ ರದ್ದತಿಗೆ ನಾಗಲ್ಯಾಂಡ್, ಮೇಘಾಲಯ ಮುಖ್ಯಮಂತ್ರಿಗಳ ಆಗ್ರಹ

Prasthutha|

ಮಿಝೋರಾಮ್: ನಾಗಾಲ್ಯಾಂಡ್ ನಲ್ಲಿ 14 ಕ್ಕೂ ಮಂದಿ ಗ್ರಾಮಸ್ಥರನ್ನು ಸೈನಿಕರು ಗುಂಡಿಕ್ಕಿ ಕೊಂದ ಹಿನ್ನೆಲೆಯಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ಅಥವಾ AFSPA ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ನಾಗಾಲ್ಯಾಂಡ್ ಮತ್ತು ಮೇಘಾಲಯ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

- Advertisement -

ನಾಗಾಲ್ಯಾಂಡ್ ನಲ್ಲಿ ನಡೆದ ಗ್ರಾಮಸ್ಥರ ಹತ್ಯೆಯ ಬಳಿಕ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ನೆಪಿಯು ರಿಯೊ, ಅಪಾಯಕಾರಿ ಈ ಕಾಯ್ದೆಯನ್ನು ತಕ್ಷಣ ಹಿಂಪಡೆಯಲಿ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ನಡುವೆ ಮುಖ್ಯಮಂತ್ರಿ ರಿಯೊ, ನಾಗಾಲ್ಯಾಂಡ್ ನ ಮೊನಾ ಜಿಲ್ಲೆಯ ಓಟಿಂಗ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ 14 ಮಂದಿ ನಾಗರಿಕರು ಮತ್ತು ಓರ್ವ ಯೋಧನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.

- Advertisement -

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನೆಫಿಯು ರಿಯೊ, AFSPA ಕಾಯ್ದೆಯನ್ನು ದೇಶದೆಲ್ಲೆಡೆ ವಿರೋಧಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್ ಸರ್ಕಾರವು AFSPA ಕಾಯ್ದೆಯನ್ನು ಹಿಂಪಡೆಯಲು ಬಯಸಿದೆ ಎಂದು ಅವರು ತಿಳಿಸಿದರು.

AFSPA ಕಾಯ್ದೆಯನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಲಿ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಟ್ವೀಟ್ ಮೂಲಕ ತಿಳಿಸಿದ್ದಾರೆ.

AFSPA ಎಂಬ ಕಾಯ್ದೆಯನ್ನು ಈಶಾನ್ಯ ಭಾರತ ಮತ್ತು ಕಾಶ್ಮೀರದಲ್ಲಿ ನಡೆಯುವ ದಂಗೆಯನ್ನು ಹತ್ತಿಕ್ಕಲು ಭಾರತೀಯ ಸೈನಿಕರಿಗೆ ನೀಡಿದ ಪರಮಾಧಿಕಾರವಾಗಿದೆ. ಆದರೆ ಈ ಕಾಯ್ದೆಯನ್ನು ಭಾರತೀಯ ಸೈನಿಕರು ದುರುಪಯೋಗ ಪಡಿಸುತ್ತಿದ್ದಾರೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬರುತ್ತಿದೆ. ಮಾತ್ರವಲ್ಲ ಈ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಮಣಿಪುರದ ಇರೋಮ್ ಶರ್ಮಿಳಾ ಎಂಬ ಮಹಿಳೆ ಸತತ 14 ವರ್ಷಗಳ ಕಾಲ ಉಪವಾಸ ಧರಣಿ ನಡೆಸಿ ದೇಶದ ಗಮನ ಸೆಳೆದಿದ್ದರು.



Join Whatsapp