ನಾಗಾಲ್ಯಾಂಡ್: AFSPA ರದ್ದತಿಗೆ ಒತ್ತಾಯಿಸಿ ನಾಗರಿಕರ ಪಾದಯಾತ್ರೆ

Prasthutha|

ಕೋಹಿಮಾ: ಕರಾಳ AFSPA ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ನೂರಾರು ನಾಗರಿಕರು ಸೋಮವಾರ ದಿಮಾಪುರದಿಂದ ರಾಜಧಾನಿ ಕೋಹಿಮಾ ವರೆಗೆ ಸುಮಾರು 75 ಕಿ.ಮೀ ಅಧಿಕ ದೂರ ಪಾದಯಾತ್ರೆ ನಡೆಸಿದರು.

- Advertisement -

ಕಳೆದ ವರ್ಷ ಡಿಸೆಂಬರ್ ನಲ್ಲಿ ಸೋಮ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ ನಲ್ಲಿ 14 ನಾಗರಿಕರನ್ನು ಹತ್ಯೆ ನಡೆಸಿದ್ದವು.

ಭದ್ರತಾ ಪಡೆಗಳ ಈ ಕ್ರೂರ ನಡೆ ಮತ್ತು ವಿವಾದಾತ್ಮಕ AFSPA ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಗ್ಲೋಬಲ್ ನಾಗಾ ಫೋರಮ್ ನಿರಂತರ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಯಾನ ಆಯೋಜಿಸಿದೆ.

- Advertisement -

ಸೋಮ ಘಟನೆಯ ಬಳಿಕ ಜನರ ಬೇಡಿಕೆಗೆ ಗಮನ ನೀಡದೆ ಡಿಸೆಂಬರ್ 30 ರಂದು ಕೇಂದ್ರ ಸರ್ಕಾರ AFSPA ಕಾಯ್ದೆಯನ್ನು ಇನ್ನೂ ಆರು ತಿಂಗಳಿಗೆ ವಿಸ್ತರಿಸಿದೆ. ಕೇಂದ್ರ ನಿರ್ಧಾರದ ವಿರುದ್ಧ ಸಾರ್ವಜನಿಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ಈ ಪ್ರತಿಭಟನಾ ಜಾಥಾವನ್ನು ಹಮ್ಮಿಕೊಂಡಿರುತ್ತಾರೆ ಎಂದು ಪಾದಯಾತ್ರೆ ಸಂಯೋಜಕರಲ್ಲಿ ಒಬ್ಬರಾದ ರುಕೆವೆಜೊ ವೆತ್ಸಾಹ್ ಸುದ್ದಿ ಸಂಸ್ಥೆಗೆ ತಿಳಿಸಿದರು.

Join Whatsapp