ದ್ವೇಷ ಭಾಷಣ: ಪ್ರಧಾನಿಗೆ ಬಹಿರಂಗ ಪತ್ರ ಬರೆದ ಕಾಂಗ್ರೆಸ್ ನಾಯಕಿ ಮಾರ್ಗರೆಟ್ ಆಳ್ವಾ

Prasthutha|

ನವದೆಹಲಿ: ಅಲ್ಪಸಂಖ್ಯಾತರ ವಿರುದ್ಧದ ದ್ವೇಷ ಭಾಷಣದ ಕುರಿತು ಕಳವಳ ವ್ಯಕ್ತಪಡಿಸಿ ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೆಟ್ ಆಳ್ವ ಸೋಮವಾರ ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದಿದ್ದಾರೆ.

- Advertisement -

ರಾಜಸ್ಥಾನ ಮತ್ತು ಉತ್ತರಾಖಂಡದ ರಾಜ್ಯಪಾಲರಾಗಿದ್ದ ಆಳ್ವಾ ತನ್ನ ಪತ್ರದಲ್ಲಿ “ನೀವು ಪ್ರಪಂಚದಾದ್ಯಂತ ಪ್ರವಾಸ ಮಾಡಿ ರೋಮ್ ನಲ್ಲಿ ಅವರ ಆಧ್ಯಾತ್ಮಿಕ ಗುರು ಪೋಪ್ ಸೇರಿದಂತೆ ವಿಶ್ವ ನಾಯಕರನ್ನು ಕರೆದು ಭಾರತವು ಸ್ವತಂತ್ರ, ಪ್ರಜಾಪ್ರಭುತ್ವ, ಜಾತ್ಯಾತೀತ ರಾಷ್ಟ್ರ ಎಂದು ಘೋಷಿಸಿದ್ದೀರಿ. ನಿಮ್ಮ ಭಾಷಣಗಳು ಮತ್ತು ಹೇಳಿಕೆಗಳನ್ನು ಜಾಗತಿಕ ಮಾಧ್ಯಮಗಳು ಪ್ರಶಂಸಿವೆ ಮತ್ತು ವ್ಯಾಪಕ ವರದಿ ಮಾಡಿವೆ”. ದುರದೃಷ್ಟವಶಾತ್ ಇಲ್ಲಿನ ವಾಸ್ತವಿಕತೆಯು ವಿಶ್ವ ನಾಯಕರಿಗೆ ವಿಶೇಷವಾಗಿ ಅಲ್ಪಸಂಖ್ಯಾತರ ಹಕ್ಕು ಮತ್ತು ಜಾತ್ಯತೀತತೆಯ ಸಂದರ್ಭದಲ್ಲಿ ಭಾರತದ ಬಗ್ಗೆ ವ್ಯಕ್ತಪಡಿಸುವ ಚಿತ್ರಣಕ್ಕೆ ಸಂಪೂರ್ಣ ವ್ಯತಿರಿಕ್ತತೆಯನ್ನು ಪ್ರಸ್ತುತಪಡಿಸುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಇತ್ತೀಚೆಗೆ ಭಾರತದಲ್ಲಿ ನಡೆದ ದ್ವೇಷ ಭಾಷಣವನ್ನು ಖಂಡಿಸಿ ಆಳ್ವಾ ಬರೆದಿದ್ದಾರೆ ಎಂದು ಹೇಳಲಾಗಿದೆ.

- Advertisement -

ದ್ವೇಷ ಭಾಷಣಗಳ ಬಗ್ಗೆ ಪ್ರಧಾನಿ ಮೋದಿಯವರ ಮೌನಕ್ಕೆ ಪ್ರತಿಕ್ರಿಯಿಸಿದ ಆಳ್ವಾ “ಭಾರತದ ಅಲ್ಪಸಂಖ್ಯಾತರು ನಿರಂತರವಾಗಿ ಹೆಚ್ಚುತ್ತಿರುವ ಹಿಂಸಾಚಾರ, ಬೆದರಿಕೆಗೆ ನಿಮ್ಮ ಮೌನ ಸಂಘಪರಿವಾರಕ್ಕೆ ನೀಡಿದ ಅನುಮೋದನೆ ಮತ್ತು ಪ್ರೋತ್ಸಾಹ ಎಂದು ಭಾವಿಸಬೇಕಾಗಬಹುದು ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Join Whatsapp