ತಮಗೆ ಬಂದ ಪ್ರಶಸ್ತಿಯನ್ನು ಸಹೋದ್ಯೋಗಿಗೆ ನೀಡಿದ ಅಧಿಕಾರಿ; ವ್ಯಾಪಕ ಪ್ರಶಂಸೆ

Prasthutha|

ಮೈಸೂರು: ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಮಗೆ ಒಲಿದು ಬಂದ ಪ್ರಶಸ್ತಿಯನ್ನು ತಮ್ಮ ಸಹೋದ್ಯೋಗಿಗೆ ನೀಡಿ, ಪ್ರಶಸ್ತಿಯ ಮೌಲ್ಯ ಮತ್ತು ಮಹತ್ವವನ್ನು ಹೆಚ್ಚಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಅಧಿಕಾರಿಯ ನಡೆಗೆ ಪ್ರಶಂಸೆ ವ್ಯಕ್ತವಾಗಿದೆ.

- Advertisement -

ಮೈಸೂರಿನಲ್ಲಿ ಈ ಅಪರೂಪದ ಪ್ರಕರಣ ನಡೆದಿದೆ. ಮೈಸೂರು ಜಿಲ್ಲಾ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರಾದ ಬಿ ಮಂಜುನಾಥ್ ಅವರು ತಮಗೆ ಬಂದ ಪ್ರಶಸ್ತಿಯನ್ನು ಸಹೋದ್ಯೋಗಿಗೆ ನೀಡಿ, ಅವರ ಸೇವಾ ಕಾರ್ಯವನ್ನು ಗೌರವಿಸಿದ್ದಾರೆ.

ಲೈಬ್ರರಿ ಡೆಪ್ಯುಟಿ ಡೈರೆಕ್ಟರ್​​ ಬಿ ಮಂಜುನಾಥ್‌ ಅವರು 2023ನೇ ಸಾಲಿನ ಅತ್ಯುತ್ತಮ ಡಿಜಿಟಲ್ ಓದುಗರ ನೋಂದಣಿ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ ಆ ಪ್ರಶಸ್ತಿಯನ್ನು ತಮ್ಮ ಸಹೋದ್ಯೋಗಿ ಪರಮೇಶ್ ಅವರಿಗೆ ನೀಡುವಂತೆ ಮಂಜುನಾಥ್‌ ಅವರು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪತ್ರ ಬರೆದು ಕೋರಿದರು. ಅಂದಹಾಗೆ ಪರಮೇಶ್ ಅವರು ಹೆಚ್ ಡಿ ಕೋಟೆ ಗ್ರಂಥಾಲಯ ಪ್ರಭಾರ ಅಧಿಕಾರಿಯಾಗಿದ್ದಾರೆ.

- Advertisement -

ಲೈಬ್ರರಿ ಪ್ರಶಸ್ತಿ ವರ್ಗಾಯಿಸಿಕೊಂಡ ಪರಮೇಶ್ ಅವರ ಸಾಧನೆ

ಪರಮೇಶ್ ಅವರ ಸಾಧನೆಯೇನೆಂದರೆ ಒಟ್ಟು 23 ಲಕ್ಷ ನೋಂದಣಿಯಲ್ಲಿ 12 ಲಕ್ಷ ನೋಂದಣಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪರಮೇಶ್‌ ಅವರಿಗೆ ಪ್ರಶಸ್ತಿಯನ್ನು ವರ್ಗಾಯಿಸಲು ಹಿರಿಯ ಅಧಿಕಾರಿ ಮಂಜುನಾಥ್‌ ಕೋರಿದ್ದರು. ಬಿ ಮಂಜುನಾಥ್ ಅವರು 2015ರಲ್ಲಿಯೂ ಇದೇ ಪ್ರಶಸ್ತಿಗೆ ಭಾಜನರಾಗಿದ್ದರು ಎಂಬುದು ಗಮನಾರ್ಹ. ಮಂಜುನಾಥ್ ಅವರ ನಿರ್ಧಾರಕ್ಕೆ ಈಗ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Join Whatsapp