ಮೈಸೂರು: ಚಾಕು​​, ಮಚ್ಚು ಹಿಡಿದು 2 ಗುಂಪುಗಳ ನಡುವೆ ಮಾರಾಮಾರಿ; ಇಬ್ಬರಿಗೆ ಗಾಯ

Prasthutha|

ಮೈಸೂರು: ಹಳೆ ವೈಷಮ್ಯದ ಹಿನ್ನೆಲೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು, ಇಬ್ಬರು ಯುವಕರು ಗಾಯಗೊಂಡಿರುವ ಘಟನೆ ಇಲ್ಲಿನ ಹಂಚ್ಯಾ ಗ್ರಾಮದಲ್ಲಿ ನಡೆದಿದೆ. ಘಟನೆಗೆ ಹಳೆ ವೈಷಮ್ಯ ಕಾರಣ ಎಂದು ತಿಳಿದುಬಂದಿದೆ.

- Advertisement -

ಯುವಕರ ಗುಂಪೊಂದು ಚಾಕು, ಮಚ್ಚುಗಳನ್ನು ಹಿಡಿದು ನುಗ್ಗಿ ಹೋಟೆಲ್​ನಲ್ಲಿ ಕುಳಿತಿದ್ದ ಕುಮಾರ್ ಹಾಗೂ ಪೈಲ್ವಾನ್ ನಂದೀಶ್ ಎಂಬುವರ ಮೇಲೆ ಹಲ್ಲೆ ಮಾಡಿದೆ. ಸ್ಥಳಕ್ಕೆ ರಮ್ಮನಹಳ್ಳಿ ಉಪ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆಗೊಳಗಾದ ಯುವಕರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರ ರಾತ್ರಿ ಸಣ್ಣ ಗಲಾಟೆಯಾಗಿತ್ತು. ಈ ಕುರಿತು ದೂರು ನೀಡಲು ನಿರ್ಧರಿಸಿದ್ದೆವು. ಇದೇ ಕಾರಣಕ್ಕೆ ಇಂದು ಹೋಟೆಲ್​ ನಲ್ಲಿ ಕುಳಿತಿದ್ದಾಗ ಮಚ್ಚು ಮತ್ತು ಲಾಂಗ್​​​ನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿದವರು ಪರಿಚಯಸ್ಥರು ಎಂದು ಚಿಕಿತ್ಸೆ ಪಡೆಯುತ್ತಿರುವ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದುಬಂದಿದೆ.



Join Whatsapp