ಬಾಕ್ಸರ್ ಲೆನ್ನಿ ಡಾ ಗಾಮಾ, ಮಾಜಿ ಫುಟ್ಬಾಲ್ ಆಟಗಾರ ಡೆನ್ಝಿಲ್ ಫ್ರಾಂಕೊ ಟಿ.ಎಂ.ಸಿ ಸೇರ್ಪಡೆ

Prasthutha|

ಪಣಜಿ: ಬಾಕ್ಸಿಂಗ್ ಚಾಂಪಿಯನ್ ಲೆನ್ನಿ ಡಾ ಗಾಮಾ ಮತ್ತು ಭಾರತೀಯ ಮಾಜಿ ಫುಟ್ಬಾಲ್ ಆಟಗಾರ ಡೆಜ್ಝಿಲ್ ಫ್ರಾಂಕೊ ಇಂದು ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ -ಟಿ.ಎಮ್.ಸಿಗೆ ಸೇರ್ಪಡೆಗೊಂಡರು. ಈ ಇಬ್ಬರು ಕ್ರೀಡಾಪಟುಗಳು ಪ್ರಸಕ್ತ ಟಿ.ಎಂ.ಸಿ ಗೋವಾ ಘಟಕದ ಸದಸ್ಯರಾಗಿರುತ್ತಾರೆ.

- Advertisement -

ಗೋವಾದ ಲೂಝಿನ್ಹೊ ಫೆಲೇರೊ ಅವರು ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿ.ಎಂ.ಸಿ ಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಗೋವಾದಲ್ಲಿ ರಾಜಕೀಯ ಬೆಳವಣಿಗೆಗೆ ನಾಂದಿ ಹಾಡಿದೆ.

ಈ ಮಧ್ಯೆ ಹೊಸ ಮುಖಗಳ ಸೇರ್ಪಡೆಯೊಂದಿಗೆ ಮುಂಬರುವ ಗೋವಾ ಅಸೆಂಬ್ಲಿ ಚುನಾವಣೆಯಲ್ಲಿ ಟಿ.ಎಂ.ಸಿ ತನ್ನ ಖಾತೆಯನ್ನು ತೆರೆಯುವ ಸಾಧ್ಯತೆಯಿದೆ. ಮಾತ್ರವಲ್ಲ 2024 ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಷ್ಟ್ರ ರಾಜಕೀಯದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿದೆ.

- Advertisement -

ಅಸ್ಸಾಂ ಸಿಲ್ಚಾರ್ ನ ಮಾಜಿ ಕಾಂಗ್ರೆಸ್ ಸಂಸದೆ ಮತ್ತು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ಸುಶ್ಮಿತಾ ದೇವ್ ಅವರು ಇತ್ತೀಚೆಗೆ ಟಿ.ಎಂ.ಸಿ ಸೇರ್ಪಡೆಯಾಗಿದ್ದರು. ಮಾತ್ರವಲ್ಲ ತ್ರಿಪುರಾದಲ್ಲಿ ಟಿ.ಎಂ.ಸಿ ಉಸ್ತುವಾರಿಯಾಗಿ ಅವರನ್ನು ನೇಮಿಸಲಾಗಿದೆ.



Join Whatsapp