105 ಪೌರ ಕಾರ್ಮಿಕರನ್ನು ವಜಾಗೊಳಿಸಿದ ಮೈಸೂರು ಮಹಾನಗರ ಪಾಲಿಕೆ!

Prasthutha|

ಮೈಸೂರು: ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ 105 ಪೌರ ಕಾರ್ಮಿಕರನ್ನು ಮೈಸೂರು ಮಹಾನಗರ ಪಾಲಿಕೆ ವಜಾಗೊಳಿಸಿದೆ.

- Advertisement -

ಯಾವುದೇ ಮುನ್ಸೂಚನೆ ನೀಡದೇ ಕಳೆದ 10 ವರ್ಷಗಳಿಂದ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ 105 ಪೌರ ಕಾರ್ಮಿಕರನ್ನು (Civilian Workers ) ಮೈಸೂರು ಮಹಾ ನಗರ ಪಾಲಿಕೆ ವಜಾಗೊಳಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಏಕಾಏಕಿ ವಜಾಗೊಳಿಸಿದ ಪಾಲಿಕೆಯ ಕ್ರಮವನ್ನು ವಿರೋಧಿಸಿ ಪೌರಕಾರ್ಮಿಕರು ಪಾಲಿಕೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ವಜಾಗೊಳಿಸಿದ ಆದೇಶವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.



Join Whatsapp