ಮೈಸೂರು: ಬಸ್ ಶೆಲ್ಟರ್ ಮೇಲಿದ್ದ ಮೂರು ಗೋಪುರ ಗಳ ಪೈಕಿ 2 ಗೋಪುರಗಳನ್ನು ತೆರವು ಮಾಡಲಾಗಿದೆ ಎಂದು ಶಾಸಕ ರಾಮದಾಸ್ ಹೇಳಿದ್ದಾರೆ.
ಮೈಸೂರಿನ ಜೆಎಸ್ ಎಸ್ ಕಾಲೇಜು ಬಳಿ ಇರುವ ಬಸ್ ಶೆಲ್ಟರ್ ವಿವಾದದ ಕೇಂದ್ರವಾಗಬಾರದು ಎಂಬ ಕಾರಣಕ್ಕೆ ಗುಂಬಜ್ ತೆರವು ಮಾಡಲಾಗಿದೆ. ಇದೇ ಮಾದರಿಯಲ್ಲಿ 12 ಬಸ್ ಶೆಲ್ಟರ್ ನಿರ್ಮಾಣ ಮಾಡಲಾಗುತ್ತೆ. ಅರಮನೆ ಮಾದರಿಯಲ್ಲಿ ಬಸ್ ಶೆಲ್ಟರ್ ನಿರ್ಮಿಸುವ ಉದ್ದೇಶ ಇತ್ತು. ಇದಕ್ಕೆ ಅನವಶ್ಯಕವಾಗಿ ಧರ್ಮದ ಲೇಪನ ಮಾಡಿದ್ದು ನೋವಾಗಿದೆ. ಹಿರಿಯರ ಸಲಹೆ ಮೇರೆಗೆ, ಅಭಿವೃದ್ಧಿ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾರೂ ಅನ್ಯತಾ ಭಾವಿಸಬಾರದು ಎಂದು ಮಾಧ್ಯಮ ಪ್ರಕಟಣೆ ಮೂಲಕ ಶಾಸಕ ರಾಮದಾಸ್ ಜನತೆಗೆ ಮನವಿ ಮಾಡಿದ್ದಾರೆ.