ರೊಹಿಂಗ್ಯಾ ಮುಸ್ಲಿಮರ ವಿರುದ್ಧ ʼನರಮೇಧʼ ಎಸಗಿದ ಮ್ಯಾನ್ಮಾರ್ ಸೇನೆ: ಅಮೆರಿಕ ಘೋಷಣೆ

Prasthutha|

ನ್ಯೂಯಾರ್ಕ್: ಮ್ಯಾನ್ಮಾರ್ ಮಿಲಿಟರಿ ಪಡೆಯು, ರೊಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ನಡೆಸಿದ ಹಿಂಸಾಚಾರವು ನರಮೇಧಕ್ಕೆ ಸಮನಾಗಿದೆ ಎಂದು ಅಮೆರಿಕಾ ಅಧಿಕೃತವಾಗಿ ಘೋಷಿಸಿದೆ. ಇದು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯವನ್ನು “ನಾಶ” ಮಾಡುವ ಪ್ರಯತ್ನವಾಗಿದೆ ಎಂಬುವುದರ ಕುರಿತು ಸ್ಪಷ್ಟ ಪುರಾವೆಗಳಾಗಿವೆ ಎಂದು ಅದು ಹೇಳಿದೆ.

- Advertisement -

ಯುಎಸ್  ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ವಾಷಿಂಗ್ಟನ್ ನಲ್ಲಿರುವ ಯುಎಸ್ ಹತ್ಯಾಕಾಂಡದ ಸ್ಮಾರಕ ವಸ್ತುಸಂಗ್ರಹಾಲಯದಲ್ಲಿ ಮಾತನಾಡುತ್ತಾ, ಸಾವಿರಾರು ಜನರ ಹತ್ಯೆಗಳನ್ನು ಉಲ್ಲೇಖಿಸಿದ್ದಲ್ಲದೆ, 2016 ಮತ್ತು 2017 ವರ್ಷಗಳಲ್ಲಿ ಸುಮಾರು ಒಂದು ಮಿಲಿಯನ್ ಜನರು ಮ್ಯಾನ್ಮಾರ್ನಿಂದ ಪಲಾಯನ ಮಾಡಿದ್ದಾರೆ ಎಂದು ಅವರು ಹೇಳಿದರು.

“ಹತ್ಯಾಕಾಂಡ ಮಾತ್ರವಲ್ಲದೇ, ನರಮೇಧವನ್ನು ಏಳು ಬಾರಿ ನಡೆಸಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ತೀರ್ಮಾನಿಸಿದೆ” ಎಂದು ಅವರು ಹೇಳಿದರು.

- Advertisement -

ಮ್ಯಾನ್ಮಾರ್ ಸೇನೆಯು “ಈ ಸಾಮೂಹಿಕ ದೌರ್ಜನ್ಯಗಳ ಹಿಂದೆ ಸ್ಪಷ್ಟ ಉದ್ದೇಶವನ್ನು” ಹೊಂದಿದೆ ಎಂಬುದಕ್ಕೆ ಪುರಾವೆಗಳಿವೆ ಎಂದು ಬ್ಲಿಂಕನ್ ಹೇಳಿದ್ದಾರೆ. ಅದು “ರೋಹಿಂಗ್ಯಾರನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಾಶಮಾಡುವ ಉದ್ದೇಶವಾಗಿತ್ತು” ಎಂದೂ ಅವರು ಉಲ್ಲೇಖಿಸಿದ್ದಾರೆ.



Join Whatsapp