ಯಾಂಗಾನ್ : ಮ್ಯಾನ್ಮಾರ್ ಸಾರ್ವತ್ರಿಕ ಚುನಾವಣೆಯಲ್ಲಿ ಸರಕಾರ ‘ಒಪ್ಪಲಾಗದ ತಪ್ಪು’ಗಳನ್ನು ಮಾಡುತ್ತಿದೆ ಎಂದು ಅಲ್ಲಿನ ಸೇನಾ ಮುಖ್ಯಸ್ಥ ಮಿನ್ ಆಂಗ್ ಹ್ಲಾಯಿಂಗ್ ಆಪಾದಿಸಿದ್ದಾರೆ.
ದೇಶದ ರಕ್ಷಕನಾಗಿದ್ದ ಸೇನೆಯು ಸಿದ್ಧತೆಗಳನ್ನು ನಿಕಟವಾಗಿ ಗಮನಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಚುನಾವಣಾ ಆಯೋಗವು ವ್ಯಾಪಕ ಕಾನೂನು ಮತ್ತು ಚುನಾವಣಾ ಪೂರ್ವ ನೀತಿಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಅವರು ಆಪಾದಿಸಿದ್ದಾರೆ.
ಮತದಾರರ ಪಟ್ಟಿಯನ್ನು ತಿರುಚಲಾಗಿದೆ, ಹಲವಾರು ಮಂದಿಯ ಹೆಸರನ್ನು ಕೈಬಿಡಲಾಗಿದೆ ಎಂದು ಹಲವು ಪ್ರತಿಪಕ್ಷ ನಾಯಕರು ದೂರಿದ್ದಾರೆ. ಕೆಲವೊಂದು ಸಾಮಾನ್ಯ ತಪ್ಪುಗಳಿದ್ದರೆ ತೊಂದರೆಯಿಲ್ಲ, ಆದರೆ ಒಪ್ಪಲಾಗದ ತಪ್ಪುಗಳಾಗಿವೆ, ಅವುಗಳನ್ನು ತಿದ್ದಲು ಹಲವು ಸಮಯ ಬೇಕಾದೀತು ಎಂದು ಅವರು ಹೇಳಿದ್ದಾರೆ.