ಹಿಂದೂ ಸಮುದಾಯದ ವಿರುದ್ಧ ದ್ವೇಷ ಹೇಳಿಕೆ ಕುಖ್ಯಾತಿಯ ಪಾಕ್ ಪಂಜಾಬ್ ಸಚಿವ ಫಯ್ಯಾಝುಲ್ ವಜಾ

Prasthutha|

ಲಾಹೋರ್ : ಹಿಂದೂ ಸಮುದಾಯದ ವಿರುದ್ಧ ದ್ವೇಷ ಹೇಳಿಕೆಗೆ ಕುಖ್ಯಾತರಾಗಿದ್ದ ಪಾಕಿಸ್ತಾನದ ಪಂಜಾಬ್ ನ ಪ್ರಾಂತೀಯ ಮಾಹಿತಿ ಸಚಿವ ಫಯ್ಯಾಝುಲ್ ಚೋಹಾನ್ ಅವರನ್ನು ತಮ್ಮ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ.

- Advertisement -

ಈ ಹಿಂದೆ ಪ್ರಧಾನಿಯವರಿಗೆ ಮಾಹಿತಿ ಮತ್ತು ಪ್ರಸಾರದ ವಿಶೇಷ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದ ಫಿರ್ದೌಸ್ ಆಶಿಖ್ ಆವಾನ್ ರನ್ನು ಮುಖ್ಯಮಂತ್ರಿ ಉಸ್ಮಾನ್ ಬುಝ್ದಾರ್ ಅವರ ವಿಶೇಷ ಮಾಹಿತಿ ಅಧಿಕಾರಿಯಾಗಿ ನೇಮಗೊಳಿಸಲಾಗಿದೆ.

ಈ ಹಿಂದೆ ಕಾಲನಿಗಳ ಇಲಾಖೆಯ ಸಚಿವ ಸ್ಥಾನ ಹೊಂದಿದ್ದ ಫಯ್ಯಾಝುಲ್ ಗೆ ಮಾಹಿತಿ ಸಚಿವ ಸ್ಥಾನವನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ಈಗ ಅವರು ಕಾಲನಿಗಳ ಇಲಾಖೆ ಸಚಿವರಾಗಿ ಮಾತ್ರ ಮುಂದುವರೆಯಲಿದ್ದಾರೆ.

Join Whatsapp