ಪ್ರತಿಭೆ ಇದ್ದರೂ ನನ್ನ ಮಗನಿಗೆ ದೇಶದಲ್ಲಿ ಅವಕಾಶ ಸಿಗಲಿಲ್ಲ: ನವೀನ್ ತಂದೆ ಕಣ್ಣೀರು

Prasthutha|

ಹಾವೇರಿ: ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಜಿಲ್ಲೆಯ ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್ ಮೃತಪಟ್ಟಿದ್ದಾನೆ.

- Advertisement -

ಮಗನನ್ನು ಕಳೆದುಕೊಂಡ ನವೀನ್ ತಂದೆ ಶೇಖರ್​ ಗೌಡ ಮಾತನಾಡಿ, ಇಲ್ಲಿನ ರಾಜಕೀಯ, ಮೀಸಲಾತಿ, ಶಿಕ್ಷಣ ಪದ್ಧತಿ ಸರಿಯಿಲ್ಲ. ಪ್ರತಿಭೆ ಇದ್ದರೂ ನನ್ನ ಮಗನಿಗೆ ಇಲ್ಲಿ ಅವಕಾಶ ಸಿಗಲಿಲ್ಲ. ಹೀಗಾಗಿ ನನ್ನ ಮಗ ಉಕ್ರೇನ್ ​ಗೆ ಹೋಗಿ ಓದಬೇಕಾಯಿತು. ನನ್ನ ಮಗ ಜೀವಂತವಾಗಿ ಭಾರತಕ್ಕೆ ವಾಪಸಾಗಲೇ ಇಲ್ಲ. ಇನ್ನುಳಿದ ಮಕ್ಕಳನ್ನಾದರೂ ಸುರಕ್ಷಿತವಾಗಿ ದೇಶಕ್ಕೆ ಕರೆತನ್ನಿ ಅಂತ ಪ್ರಧಾನಿ ಮೋದಿಗೆ ಮೃತ ನವೀನ್ ತಂದೆ ಮನವಿ ಮಾಡಿದ್ದಾರೆ.

Join Whatsapp