ಹಾವೇರಿ: ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಜಿಲ್ಲೆಯ ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್ ಮೃತಪಟ್ಟಿದ್ದಾನೆ.
ಮಗನನ್ನು ಕಳೆದುಕೊಂಡ ನವೀನ್ ತಂದೆ ಶೇಖರ್ ಗೌಡ ಮಾತನಾಡಿ, ಇಲ್ಲಿನ ರಾಜಕೀಯ, ಮೀಸಲಾತಿ, ಶಿಕ್ಷಣ ಪದ್ಧತಿ ಸರಿಯಿಲ್ಲ. ಪ್ರತಿಭೆ ಇದ್ದರೂ ನನ್ನ ಮಗನಿಗೆ ಇಲ್ಲಿ ಅವಕಾಶ ಸಿಗಲಿಲ್ಲ. ಹೀಗಾಗಿ ನನ್ನ ಮಗ ಉಕ್ರೇನ್ ಗೆ ಹೋಗಿ ಓದಬೇಕಾಯಿತು. ನನ್ನ ಮಗ ಜೀವಂತವಾಗಿ ಭಾರತಕ್ಕೆ ವಾಪಸಾಗಲೇ ಇಲ್ಲ. ಇನ್ನುಳಿದ ಮಕ್ಕಳನ್ನಾದರೂ ಸುರಕ್ಷಿತವಾಗಿ ದೇಶಕ್ಕೆ ಕರೆತನ್ನಿ ಅಂತ ಪ್ರಧಾನಿ ಮೋದಿಗೆ ಮೃತ ನವೀನ್ ತಂದೆ ಮನವಿ ಮಾಡಿದ್ದಾರೆ.