ಟ್ವಿಟ್ಟರ್ ನಲ್ಲಿ ನನ್ನ ಫಾಲೋವರ್ಸ್ ಸಂಖ್ಯೆ ಕಡಿಮೆ ತೋರಿಸಲಾಗುತ್ತಿದೆ: ರಾಹುಲ್ ಗಾಂಧಿ ಆರೋಪ

Prasthutha|

ಹೊಸದಿಲ್ಲಿ: ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಮ್ಮ ಟ್ವಿಟ್ಟರ್ ಖಾತೆಯನ್ನು ಹತ್ತಿಕ್ಕಲಾಗುತ್ತಿದೆ. ಸರ್ಕಾರದ ಒತ್ತಡಕ್ಕೆ ಮಣಿದು ತಮ್ಮ ಧ್ವನಿಯನ್ನು ಅಡಗಿಸುವ ಸಲುವಾಗಿ ತಮ್ಮ ಟ್ವಿಟರ್ ಫಾಲೋವರ್ಸ್ ಮೇಲೆ ಅಘೋಷಿತ ನಿರ್ಬಂಧ ಹೇರಲಾಗುತ್ತಿದೆ. ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

- Advertisement -


ಈ ಬಗ್ಗೆ ರಾಹುಲ್ ಗಾಂಧಿ ಡಿಸೆಂಬರ್ ನಲ್ಲಿ ಟೈಟರ್ ಸಿಇಒ ಪರಾಗ್ ಅಗರ್ವಾಲ್ ಗೆ ಬರೆದಿರುವುದಾಗಿ ತಿಳಿಸಿದ್ದಾರೆ.
ಪತ್ರದಲ್ಲಿ, “ಭಾರತದಲ್ಲಿ ಮುಕ್ತ ಮತ್ತು ನ್ಯಾಯಯುತ ಭಾಷಣ ತಡೆಯುವಲ್ಲಿ ಟ್ವಿಟರ್ ಪಾತ್ರವಿದೆ ಎಂದು ನಾನು ಭಾವಿಸುತ್ತೇನೆ. ಈ ಅಂಶವನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ನನ್ನ ಧ್ವನಿಯನ್ನು ಹತ್ತಿಕ್ಕಲು ಸರ್ಕಾರದಿಂದ ಟ್ವಿಟರ್ ಇಂಡಿಯಾದಲ್ಲಿ ಸಾಕಷ್ಟು ಒತ್ತಡವಿದೆ ಎಂದು ಜನರು ನನಗೆ ಹೇಳಿದ್ದಾರೆ’ ಎಂದಿದ್ದಾರೆ.


ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಟ್ವಿಟ್ಟರ್ ಅಡ್ಡಿ ಮಾಡುತ್ತಿದೆ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ದೂರಿಗೆ ಟ್ವಿಟರ್ ವಕ್ತಾರರು ಪ್ರತಿಕ್ರಿಯೆ ನೀಡಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿಲ್ಲ, ಟ್ವಿಟರ್ ನ ನಿಯಮಗಳನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಹುಲ್ ಗಾಂಧಿಗೆ ಉತ್ತರ ನೀಡಿದ್ದಾರೆ.

- Advertisement -


ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಮತ್ತು ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಟ್ವಿಟರ್ ತನ್ನಹಿಂಬಾಲಕರ ಸಂಖ್ಯೆಯನ್ನು ಕಡಿಮೆ ಮಾಡಲು ಮುಂದಾಗುತ್ತಿದೆ ಎಂದು ಆರೋಪಿಸಿ ರಾಹುಲ್ ಗಾಂಧಿ ಕಳೆದ ಡಿಸೆಂಬರ್ ನಲ್ಲಿ ಟ್ವಿಟರ್ ಸಿಇಒ ಗೆ ದೂರಿನ ಪತ್ರವನ್ನು ನೀಡಿದ್ದರು.


ರಾಹುಲ್ ಗಾಂಧಿ ಟ್ವಿಟರ್ ಗೆ ನೀಡಿದ ದೂರಿನ ವಿವರಗಳ ಪ್ರಕಾರ, ತಿಂಗಳಿಗೆ 2.5 ದಷ್ಟು ಹೊಸ ಹಿಂಬಾಲಕರನ್ನು ಪಡೆಯುತ್ತಿದ್ದೇನೆ ಎಂದು ಹೇಳಿದ್ದರು. ಇದು ಕೆಲವು ತಿಂಗಳಲ್ಲಿ 6.5 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ, ಆಗಸ್ಟ್ 2021 ರಿಂದ ಹೊಸ ಹಿಂಬಾಲಕರ ಖಾತೆಯು ತಿಂಗಳಿಗೆ ಸುಮಾರು 2,500 ಕ್ಕೆ ಕುಸಿದಿದೆ. ಈ ಅವಧಿಯಲ್ಲಿ, ಅವರ ಒಟ್ಟು 19.5 ದಶಲಕ್ಷದಷ್ಟು ಹಿಂಬಾಲಕರನ್ನು ಮರೆಮಾಚಲಾಗಿದೆ. 2021 ಆಗಸ್ಟ್ ನಲ್ಲಿ ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾದ ವ್ಯಕ್ತಿಯ ಕುಟುಂಬದ ಚಿತ್ರವನ್ನು ಟ್ವೀಟ್ ಮಾಡಿದಾಗ ರಾಹುಲ್ ಅವರ ಟ್ವಿಟರ್ ಖಾತೆ ವಿವಾದಾಸ್ಪದವಾಗಿತ್ತು. ಬಿಜೆಪಿ ಸದಸ್ಯರ ದೂರುಗಳ ನಂತರ ರಾಹುಲ್ ಅವರ ಖಾತೆಯನ್ನು ಎಂಟು ದಿನಗಳ ವರೆಗೆ ಸ್ಥಗಿತಗೊಳಿಸಲಾಗಿತ್ತು.

Join Whatsapp