ಜಾರ್ಖಂಡ್ ರೈಲ್ವೆ ಹಳಿಯಲ್ಲಿ ಸ್ಫೋಟ; ಸಂಚಾರ ಸ್ಥಗಿತ

Prasthutha|

ನವದೆಹಲಿ: ಜಾರ್ಖಂಡ್ ನ ಗಿರಿದಿಹ್ ಜಿಲ್ಲೆಯ ರೈಲ್ವೆ ಹಳಿಯಲ್ಲಿ ಗುರುವಾರ ಮುಂಜಾನೆ ನಡೆದ ಸ್ಫೋಟದಿಂದಾಗಿ ರೈಲಿನ ಸಂಚಾರ ಅಸ್ತವ್ಯಸ್ತವಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ನಿಷೇಧಿತ ಮಾವೋವಾದಿ ಸದಸ್ಯರು ಈ ಸ್ಫೋಟ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.

ಈ ಸ್ಫೋಟದಿಂದಾಗಿ ಹೌರಾ – ನವದೆಹಲಿ ರೈಲು ಸೇವೆ ಸುಮಾರು ಆರು ಗಂಟೆಗಳ ಕಾಲ ಸ್ಥಗಿತಗೊಂಡವು ಎಂದು ಆರ್. ಪಿ.ಎಫ್ ಧನ್ ಬಾದ್ ಹಿರಿಯ ಕಮಾಂಡೆಂಟ್ ಹೇವಂತ್ ಕುಮಾರ್ ತಿಳಿಸಿದ್ದಾರೆ.

- Advertisement -

ಮಾತ್ರವಲ್ಲ ಈ ಸ್ಫೋಟದಲ್ಲಿ ಚಿಚಾಕಿ ಮತ್ತು ಚೌಧರಿ ಬಂದ್ ನಿಲ್ದಾಣದ ನಡುವಿನ ರೈಲು ಹಳಿಗೆ ಹಾನಿಯಾಗಿದೆ ಎಂದು ಅವರು ಹೇಳಿದರು.

ಸ್ಫೋಟದ ಬಳಿಕ ಗಿರಿದಿಹ್ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ರೇಣು ಅವರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Join Whatsapp