ಜಮ್ಮು – ಕಾಶ್ಮೀರದಲ್ಲಿ ನೆರೆಮನೆಯ ಹಿಂದೂವಿನ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಮರು

Prasthutha|

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಕಾಕ್ರಾನ್ ಗ್ರಾಮದಲ್ಲಿ ಮೃತಪಟ್ಟ ಹಿಂದೂ ಒಬ್ಬನ ಅಂತ್ಯಕ್ರಿಯೆಯನ್ನು ನೆರೆಹೊರೆಯ ಮುಸ್ಲಿಮರು ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಸಲು ನೆರವಾದರು. ಆತನ ಸಹೋದರನನ್ನು ಕಳೆದ ವರ್ಷ ಉಗ್ರರು ಹತ್ಯೆಗೈದಿದ್ದರು.


ಸಿಐಎಸ್ ಎಫ್- ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಕೆಲಸ ಮಾಡುವ 55 ವಯಸ್ಸಿನ ಬಲ್ಬೀರ್ ಸಿಂಗ್ ಗುರುವಾರ ಸಂಜೆ ಕಾಕ್ರಾನ್ ಗ್ರಾಮದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಸಿಂಗ್ ಅವರನ್ನು ಅಮೃತಸರಕ್ಕೆ ವರ್ಗಾವಣೆ ಮಾಡಲಾಗಿತ್ತು. ಅಲ್ಲಿ ಕಳೆದ ವರ್ಷ ಅವರ ಸಹೋದರನ್ನು ಉಗ್ರರು ಕೊಂದಿದ್ದರು.

- Advertisement -


ಕಾಕ್ರಾನ್ ಗ್ರಾಮದಲ್ಲಿ ರಜಪೂತ ಹಿಂದೂ ಕುಟುಂಬ ಅವರದೊಂದು ಮಾತ್ರ ವಾಸವಾಗಿತ್ತು. ಶುಕ್ರವಾರ ಅವರ ನೆರೆಹೊರೆಯ ಮತ್ತು ಊರಿನ ಮುಸ್ಲಿಮರು ಸೇರಿಕೊಂಡು ಸಿಂಗ್ ಅವರ ಅಂತ್ಯಕ್ರಿಯೆಯನ್ನು ವಿಧಿವತ್ತಾಗಿ ನಡೆಸಿದರು.
ಸಿಐಎಸ್ ಎಫ್ ನ ಅಧಿಕಾರಿಗಳು ಸಹ ಸಾವಿಗೀಡಾದ ಸಹೋದ್ಯೋಗಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.

- Advertisement -